ದೆಹಲಿ ಕೆಂಪುಕೋಟೆ ಹಿಂಸಾಚಾರ: ಮತ್ತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ
ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
Published: 23rd February 2021 02:03 PM | Last Updated: 23rd February 2021 02:03 PM | A+A A-

ಬಂಧಿತ ಆರೋಪಿಗಳು
ಜಮ್ಮು: ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಜಮ್ಮುವಿನಲ್ಲಿ ಕಾರ್ಯಾಚರಣೆ ನಡೆಸಿದ ದೆಹಲಿ ಸಿಸಿಬಿ ಅಧಿಕಾರಿಗಳು ಜಮ್ಮು ನಗರದ ಛಾಠಾ ಪ್ರದೇಶದ ನಿವಾಸಿ ಜಮ್ಮು ಮತ್ತು ಕಾಶ್ಮೀರ ಸಂಯುಕ್ತ ಕಿಸಾನ್ ರಂಗದ ಅಧ್ಯಕ್ಷ ಮೊಹಿಂದರ್ ಸಿಂಗ್(45 ವರ್ಷ) ಮತ್ತು ಜಮ್ಮುವಿನ ಗೋಲೆ ಗುರ್ಜಾಲ್ ನಿವಾಸಿ ಮನ್ದೀಪ್ ಸಿಂಗ್(23 ವರ್ಷ) ಎಂಬುವವರನ್ನು ಬಂಧಿಸಿದ್ದಾರೆ.
Delhi Police Crime Branch has arrested two key wanted accused from Jammu, in connection with 26th January violence at Red Fort pic.twitter.com/1xfrJtrY0u
— ANI (@ANI) February 23, 2021
ಇಬ್ಬರೂ ಆರೋಪಿಗಳು ಪ್ರಕರಣದ ಪ್ರಮುಖ ಸಂಚುಕೋರರು ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಅಪರಾಧ ವಿಭಾಗದ ಪೊಲೀಸರು, ಜಮ್ಮು ಕಾಶ್ಮೀರ ಪೊಲೀಸರ ನೆರವಿನೊಂದಿಗೆ ಈ ಇಬ್ಬರು ಆರೋಪಿಗಳನ್ನು ಸೋಮವಾರ ರಾತ್ರಿ ಜಮ್ಮುವಿನಲ್ಲಿ ಬಂಧಿಸಿದ್ದಾರೆ. ಇವರನ್ನು ದೆಹಲಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ನಿರಪರಾಧಿಗಳು ಎಂದ ಕುಟುಂಬಸ್ಥರು
ಇನ್ನು, 'ಮೊಹಿಂದರ್ ಸಿಂಗ್ ನಿರಾಪರಾಧಿ. ಅವರದ್ದೇನೂ ತಪ್ಪಿಲ್ಲ. ಅವರನ್ನು ಬಿಡುಗಡೆ ಮಾಡಿ.. ಹಿಂಸಾಚಾರ ನಡೆದಾಗ ದೆಹಲಿ ಗಡಿಯಲ್ಲಿದ್ದರು, ಕೆಂಪು ಕೋಟೆಯಲ್ಲಿ ಅಲ್ಲ ಎಂದು ಕುಟುಂಬದವರು ಒತ್ತಾಯಿಸಿದ್ದಾರೆ.