ಇಂಧನ ದರ ಏರಿಕೆ ಖಂಡಿಸಿ ರಾಬರ್ಟ್ ವಾದ್ರಾ ಪ್ರತಿಭಟನೆ: ದೆಹಲಿಯಲ್ಲಿ ಸೈಕಲ್ ಸವಾರಿ

 ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಸೋಮವಾರ ತಮ್ಮ ನಿವಾಸದಿಂದ ಕಚೇರಿಗೆ ಬೈಸಿಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟಿಸಿದರು.

Published: 23rd February 2021 08:40 AM  |   Last Updated: 23rd February 2021 02:19 PM   |  A+A-


robert vadra

ರಾಬರ್ಟ್ ವಾದ್ರಾ

Posted By : Shilpa D
Source : PTI

ನವದೆಹಲಿ: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಸೋಮವಾರ ತಮ್ಮ ನಿವಾಸದಿಂದ ಕಚೇರಿಗೆ ಬೈಸಿಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟಿಸಿದರು.

'ನಾನು ಹೇಳಿದ್ದನ್ನೇ ಮಾಡುತ್ತೇನೆ. ಸಾಕಷ್ಟು ವಾಹನ ದಟ್ಟಣೆಯ ನಡುವೆಯೂ ಸೋಮವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆ ಸುದೀರ್ಘ ಬೈಸಿಕಲ್ ಸವಾರಿ ನಡೆಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನರು ಪ್ರತಿದಿನ ಏನನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಸರ್ಕಾರವು ಇಂಧನ ಬೆಲೆಗಳನ್ನು ಕೂಡಲೇ ಕಡಿಮೆ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.

ಏಸಿ ಕಾರಿನಿಂದ ಹೊರಗೆ ಬಂದು ಜನರು ಪಡುತ್ತಿರುವ ಕಷ್ಟಗಳನ್ನು ಗಮನಿಸಿ. ಜನರ ಕಷ್ಟ ನೋಡಿದರೆ ನೀವು ತೈಲ ಬೆಲೆ ಇಳಿಕೆ ಮಾಡುತ್ತೀರಿ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಇದೇ ವೇಳೆ ತೈಲ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಾದ್ರಾ, ಮಾಡುವುದೆಲ್ಲಾ ಮಾಡಿ ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಬರ್ಟ್‌ ವಾದ್ರಾ ಸೈಕಲ್‌ ಪ್ರಯಾಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ, ಸೂಟ್ ಧರಿಸಿ ಬೈಸಿಕಲ್ ಸವಾರಿ ಮಾಡುವ ವೇಳೆ ವಾದ್ರಾ ಅವರ ಐಷಾರಾಮಿ ವಾಹನ ಮತ್ತು ಭದ್ರತಾ ಸಿಬ್ಬಂದಿಯು ಅವರನ್ನು ಹಿಂಬಾಲಿಸುತ್ತಿದ್ದರಿಂದಾಗಿ ಕೆಲವು ಬಿಜೆಪಿ ಮುಖಂಡರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಾದ್ರಾ ಅವರನ್ನು ಟ್ರೋಲ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp