ಮಹಾರಾಷ್ಟ್ರದಲ್ಲಿ ಕೊರೋನಿಲ್ ಮಾರಾಟಕ್ಕೆ ಅನುಮತಿ ಇಲ್ಲ: ಮಹಾ ಸಚಿವ ಅನಿಲ್ ದೇಶಮುಖ್
'ಸರಿಯಾದ ಪ್ರಮಾಣೀಕರಣ' ಇಲ್ಲದ ಪತಂಜಲಿಯ ಕೊರೋನಿಲ್ ಮಾರಾಟಕ್ಕೆ ರಾಜ್ಯದಲ್ಲಿ ಅನುಮತಿ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಮಂಗಳವಾರ ಹೇಳಿದ್ದಾರೆ.
Published: 23rd February 2021 07:44 PM | Last Updated: 23rd February 2021 07:44 PM | A+A A-

ಕೊರೋನಿಲ್ ಮಾತ್ರೆಗಳು
ಮುಂಬೈ: 'ಸರಿಯಾದ ಪ್ರಮಾಣೀಕರಣ' ಇಲ್ಲದ ಪತಂಜಲಿಯ ಕೊರೋನಿಲ್ ಮಾರಾಟಕ್ಕೆ ರಾಜ್ಯದಲ್ಲಿ ಅನುಮತಿ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಮಂಗಳವಾರ ಹೇಳಿದ್ದಾರೆ.
‘ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಂಡಿದೆ ಎಂದು ಬಾಬಾ ರಾಮ್ದೇವ್ ಅವರು ಸುಳ್ಳು ಹೇಳಿರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ), ತೀವ್ರ ಆಘಾತ ವ್ಯಕ್ತಪಡಿಸಿದ ಬೆನ್ನಲ್ಲೇ ಮಹಾ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದೇಶಮುಖ್ ಅವರು, ಇಬ್ಬರು ಹಿರಿಯ ಕೇಂದ್ರ ಸಚಿವರು ಔಷಧಿಯನ್ನು ಅನುಮೋದಿಸಿರುವುದು ಅತ್ಯಂತ ಶೋಚನೀಯ ಎಂದಿದ್ದಾರೆ.
ಕೊರೋನಿಲ್ ಕ್ಲಿನಿಕಲ್ ಟ್ರಯಲ್ ಬಗ್ಗೆ ಐಎಂಎ ಪ್ರಶ್ನಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಪತಂಜಲಿಯ ಆಯುರ್ವೇದ ಮಾತ್ರೆಗಳಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸೂಕ್ತ ಮನ್ನಣೆ ಪಡೆಯದ ಕೊರೋನಿಲ್ ಮಾರಾಟಕ್ಕೆ ರಾಜ್ಯದಲ್ಲಿ ಅನುಮತಿ ಇಲ್ಲ ಎಂದು ಅನಿಲ್ ದೇಶಮುಖ್ ಅವರು ಹೇಳಿದ್ದಾರೆ.