ಸೇನೆ ಹಿಂತೆಗೆತ ಭಾರತ ಮತ್ತು ಚೀನಾ ಎರಡಕ್ಕೂ ಗೆಲುವಿನ ಸನ್ನಿವೇಶ: ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ

ಪ್ಯಾಂಗೊಂಗ್ ತ್ಸೊ ನದಿಯ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಭಾರತ ಮತ್ತು ಚೀನಾ ಸೇನೆ ಹಿಂತೆಗೆತ  ಉತ್ತಮ ಅಂತಿಮ ಫಲಿತಾಂಶವಾಗಿದೆ ಮತ್ತು ಎರಡೂ ಕಡೆಯವರಿಗೂ ಗೆಲುವಿನ ಸನ್ನಿವೇಶವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಬುಧವಾರ ಹೇಳಿದ್ದಾರೆ.

Published: 24th February 2021 08:26 PM  |   Last Updated: 24th February 2021 08:26 PM   |  A+A-


MM_Naravane1

ಸೇನಾ ಮುಖ್ಯಸ್ಥ ಎಂಎಂ ನರಾವಣೆ

Posted By : Nagaraja AB
Source : The New Indian Express

ನವದೆಹಲಿ: ಪ್ಯಾಂಗೊಂಗ್ ತ್ಸೊ ನದಿಯ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಭಾರತ ಮತ್ತು ಚೀನಾ ಸೇನೆ ಹಿಂತೆಗೆತ  ಉತ್ತಮ ಅಂತಿಮ ಫಲಿತಾಂಶವಾಗಿದೆ ಮತ್ತು ಎರಡೂ ಕಡೆಯವರಿಗೂ ಗೆಲುವಿನ ಸನ್ನಿವೇಶವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಬುಧವಾರ ಹೇಳಿದ್ದಾರೆ. ಪೂರ್ವ ಲಡಾಖ್ ನಲ್ಲಿನ ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯತಂತ್ರ ರೂಪಿಸಲಾಗುತ್ತಿದೆ  ಎಂದು ಅವರು ಹೇಳಿದ್ದಾರೆ.

ಲಡಾಖ್ ಸಂಘರ್ಷ ವೇಳೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವೆ  ಬಹಿರಂಗ ಒಪ್ಪಂದದ" ಯಾವುದೇ ಲಕ್ಷಣಗಳಿಲ್ಲ ಆದರೆ,  ಭಾರತವು ದೀರ್ಘಾವಧಿಯ  ಕಾರ್ಯತಂತ್ರವನ್ನು ರೂಪಿಸುತ್ತದೆ ಎಂದ ಅವರು, ಆಂತರಿಕ ಭದ್ರತೆಯನ್ನು ಉಲ್ಲೇಖಿಸಿದರು.

ಗಡಿ ಸಂಘರ್ಷದ  ಆರಂಭದಿಂದಲೇ,  ಎಲ್ಲ ಕಡೆಯೂ ಭಾರತ ಒಟ್ಟಾಗಿ ಕೆಲಸ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಚೀನಾದ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು.

ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಷನ್ ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ನಾವೆಲ್ಲಾ ಒಟ್ಟಾಗಿದ್ದು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಚರ್ಚಿಸುತ್ತಿದ್ದೇವು. ಏನೆಲ್ಲಾ ಮಾಡಿದ್ದೇವು, ಅದೆಲ್ಲಾ ಫಲಿತಾಂಶವಾಗಿ ಬಂದಿದೆ. ಈವರೆಗಿನ ಸಾಧನೆ ಉತ್ತಮವಾಗಿದೆ ಎಂದರು.

ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ನೀಡಲ್ಪಟ್ಟ ಸಲಹೆಯು ಸಹ ಅತ್ಯಂತ ಉಪಯುಕ್ತವಾಗಿದೆ ಮತ್ತು ಕಾರ್ಯತಂತ್ರದ ಮಟ್ಟದ ಒಳನೋಟವೂ ಪ್ರತಿಕ್ರಿಯೆ ಕೈಗೊಳ್ಳುವಲ್ಲಿ ನರೆವು ನೀಡಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದರು.

ಕಳೆದ ವಾರ, ಉಭಯ ದೇಶಗಳ ಸೇನೆಗಳು ಅತ್ಯಂತ ಹೆಚ್ಚಿನ ಎತ್ತರದ ಪ್ರದೇಶದಲ್ಲಿರುವ ಪಾಂಗೊಂಗ್ ತ್ಸೊದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದ್ದವು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp