ಪ್ರಧಾನಿ ಮೋದಿ ದೊಡ್ಡ ಗಲಭೆಕೋರ, ಅವರಿಗೆ ಟ್ರಂಪ್ ಗಿಂತ ಅತ್ಯಂತ ಕೆಟ್ಟ ಭವಿಷ್ಯ ಕಾದಿದೆ: ಮಮತಾ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮೋದಿ ಅತಿ ದೊಡ್ಡ ಗಲಭೆಕೋರ, ಅವರಿಗೆ ಅಮೆರಿಕ ಮಾಜಿ...

Published: 24th February 2021 05:00 PM  |   Last Updated: 24th February 2021 05:00 PM   |  A+A-


mamata1

ಮಮತಾ ಬ್ಯಾನರ್ಜಿ

Posted By : Lingaraj Badiger
Source : PTI

ಸಹಾಗಂಜ್‌: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮೋದಿ ಅತಿ ದೊಡ್ಡ ಗಲಭೆಕೋರ, ಅವರಿಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಅತ್ಯಂತ ಕೆಟ್ಟ ಭವಿಷ್ಯ ಕಾದಿದೆ ಎಂದು ಕಿಡಿ ಕಾರಿದ್ದಾರೆ.

ಇಂದು ಹೂಗ್ಲಿ ಜಿಲ್ಲೆಯ ಸಹಾಗಂಜ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ದೇಶಾದ್ಯಂತ ಸುಳ್ಳು ಮತ್ತು ದ್ವೇಷವನ್ನು ಹರಡುತ್ತಿದ್ದಾರೆ ಎಂದರು.

ಮೋದಿ ಅತಿ ದೊಡ್ಡ ಗಲಭೆಕೋರ. ಡೊನಾಲ್ಡ್‌ ಟ್ರಂಪ್‌ ಅವರಗಿಂತಲೂ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಮೋದಿ ಎದುರಿಸಲಿದ್ದಾರೆ. ಹಿಂಸಾಚಾರದಿಂದ ಯಾವುದೇ ರೀತಿ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ದೀದಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಾನು ಗೋಲಕೀಪರ್‌ ಆಗಿರುತ್ತೇನೆ. ನೀವು(ಬಿಜೆಪಿ) ಒಂದೇ ಒಂದು ಗೋಲು ಗಳಿಸಲು ಸಾಧ್ಯವಿಲ್ಲ. ಫುಟ್ಬಾಲ್‌ನಲ್ಲಿ ಎಲ್ಲ ಶಾಟ್‌ಗಳು ಗೋಲ್‌ಪೋಸ್ಟ್‌ ಮೇಲೆ ಹೋದಂತೆ ನಿಮ್ಮ ಪರಿಸ್ಥಿತಿಯೂ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಸಿಬಿಐ ತಮ್ಮ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ ಅವರ ಪತ್ನಿಯ ವಿಚಾರಣೆ ನಡೆಸಿರುವುದು ಖಂಡನೀಯ. ಇದು ನಮ್ಮ ಮಹಿಳೆಗೆ ಮಾಡಿದ ಅವಮಾನ ಎಂದು ಹೇಳಿದರು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp