ಮತದಾರರ ಬುದ್ಧಿಮತ್ತೆಯನ್ನು ಗೌರವಿಸಬೇಕು: ರಾಹುಲ್ ಹೇಳಿಕೆ ಕುರಿತು ಕಪಿಲ್ ಸಿಬಲ್ ಪ್ರತಿಕ್ರಿಯೆ
ರಾಹುಲ್ ಗಾಂಧಿಯವರ 'ಉತ್ತರ-ದಕ್ಷಿಣ' ಟೀಕೆಗಳ ಬಗ್ಗೆ ನೇರವಾಗಿ ಪ್ರತಿಕ್ರಯಿಸದೆ ಹೋದರೂ ಸಹ "ಕಾಂಗ್ರೆಸ್ ಯಾವಾಗಲೂ ಮತದಾರರನ್ನು ಗೌರವಿಸುತ್ತದೆ, ಮತ್ತು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುತ್ತದೆ "ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
Published: 24th February 2021 11:04 PM | Last Updated: 24th February 2021 11:04 PM | A+A A-

ಕಪಿಲ್ ಸಿಬಲ್
ನವದೆಹಲಿ: ರಾಹುಲ್ ಗಾಂಧಿಯವರ 'ಉತ್ತರ-ದಕ್ಷಿಣ' ಟೀಕೆಗಳ ಬಗ್ಗೆ ನೇರವಾಗಿ ಪ್ರತಿಕ್ರಯಿಸದೆ ಹೋದರೂ ಸಹ "ಕಾಂಗ್ರೆಸ್ ಯಾವಾಗಲೂ ಮತದಾರರನ್ನು ಗೌರವಿಸುತ್ತದೆ, ಮತ್ತು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುತ್ತದೆ "ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಕಾಂಗ್ರೆಸ್ ವಿಭಜನೆಯನ್ನು ಸೃಷ್ಟಿಸಿದೆ ಎಂದು ಆರೋಪಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಬಲ್ ಇದು ಹಾಸ್ಯಾಸ್ಪದ ಮತ್ತು ನಗೆಪಾಟಲು ಹೇಳಿಕೆಯಾಗಿದೆ.ಇದು ಆ ಪಕ್ಷದ "ಸಮುದಾಯಗಳನ್ನು, ಮನಸ್ಥಿತಿಗಳನ್ನು, ಮಾಜಗಳನ್ನು ಧ್ರುವೀಕರಿಸುವ ಕಲೆಯನ್ನು ಪರಿಪೂರ್ಣವಾಗಿ ತೋರಿಸಿದೆ." ಎಂದಿದ್ದಾರೆ.
ರಾಹುಲ್ ಗಾಂಧಿ ಈ ಹೇಳಿಕೆಯ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದು ಮಾಜಿ ಕಾಂಗ್ರೆಸ್ ಮುಖ್ಯಸ್ಥ ಉತ್ತರ ಭಾರತೀಯರನ್ನು ಕೀಳಾಗಿ ಬಿಂಬಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ರಾಹುಲ್ ಅವರ ಈ ಟೀಕೆಗಳ ಬಗ್ಗೆ ಕೇಳಿದಾಗ, ಸಿಬಲ್ "ನನಗೆ ಹೇಳಿಕೆಯ ಸಾರಾಂಶ ತಿಳಿದಿಲ್ಲ, ಅಲ್ಲದೆ ಹೇಳಿಕೆಯ ಸಂದರ್ಭ ಸಹ ಗೊತ್ತಿಲ್ಲ.ಆದ್ದರಿಂದ ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ" ಎಂದು ಹೇಳಿದರು.
"ನಾನು ಹೇಳುವುದೆಂದರೆ ಕಾಂಗ್ರೆಸ್ಸಿಗನಾಗಿ, ಈ ದೇಶದ ಪ್ರತಿಯೊಬ್ಬ ಚುನಾಯಿತ ನಾಯಕನನ್ನು ಅವರು ಎಲ್ಲೇ ಇದ್ದರೂ ನಾನು ಗೌರವಿಸುತ್ತೇನೆ. ಆಕೆ ಅಥವಾ ಆತ ಮತದಾನದ ಹಕ್ಕನ್ನು ಚಲಾಯಿಸಿದಾಗ ಅವರ ಆಯ್ಕೆಯ ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆಯನ್ನು ನಾನು ಗೌರವಿಸುತ್ತೇನೆ" ಅವರು ಹೇಳಿದರು. ಈ ದೇಶದಲ್ಲಿ ಚುನಾಯಿತ ನಾಯಕನೊಬ್ಬ ಗೌರವಕ್ಕೆ ಅರ್ಹನಲ್ಲ ಎಂದು ಯಾವುದೇ ಕಾಂಗ್ರೆಸ್ ವ್ಯಕ್ತಿ ನಂಬುವುದಿಲ್ಲ ಎಂದು ಸಿಬಲ್ ಹೇಳಿದ್ದಾರೆ.
ಬಿಜೆಪಿ "ಸಮುದಾಯಗಳನ್ನು ವಿಭಜಿಸುವ, ಮನಸ್ಸುಗಳನ್ನು ವಿಭಜಿಸುವ ಮತ್ತು ಸಮಾಜಗಳನ್ನು ಧ್ರುವೀಕರಿಸುವ ಕಲೆಯನ್ನು ಪರಿಪೂರ್ಣಗೊಳಿಸಿದ ರಾಜಕೀಯ ಪಕ್ಷ" ಎಂದು ಸಿಬಲ್ ಹೇಳಿದ್ದಾರೆ.