ಎಂಸಿಐ ನಿಯಮ ಉಲ್ಲಂಘನೆ: ಉನ್ನಾವೊ ವೈದ್ಯಕೀಯ ಕಾಲೇಜಿಗೆ 5 ಕೋಟಿ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಕ್ಕಾಗಿ ಉನ್ನಾವೊದ ಖಾಸಗಿ ವೈದ್ಯಕೀಯ ಕಾಲೇಜಿಗೆ ಸುಪ್ರೀಂ ಕೋರ್ಟ್ ಬುಧವಾರ 5 ಕೋಟಿ ರೂ. ದಂಡ ವಿಧಿಸಿದೆ.

Published: 24th February 2021 08:44 PM  |   Last Updated: 24th February 2021 08:45 PM   |  A+A-


ಸುಪ್ರೀಂ ಕೋರ್ಟ್

Posted By : Raghavendra Adiga
Source : PTI

ನವದೆಹಲಿ: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಕ್ಕಾಗಿ ಉನ್ನಾವೊದ ಖಾಸಗಿ ವೈದ್ಯಕೀಯ ಕಾಲೇಜಿಗೆ ಸುಪ್ರೀಂ ಕೋರ್ಟ್ ಬುಧವಾರ 5 ಕೋಟಿ ರೂ. ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಸರಸ್ವತಿ ವೈದ್ಯಕೀಯ ಕಾಲೇಜು 132 ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಮಹಾನಿರ್ದೇಶಕ ವೈದ್ಯಕೀಯ ಶಿಕ್ಷಣ (ಡಿಜಿಎಂಇ) ಯಿಂದ ಅನುಮತಿ ಪಡೆಯದೆ ಕಾಲೇಜಿಗೆ ಪ್ರವೇಶಾತಿ ಮಾಡಿಕೊಂಡಿದೆ. ಆದಾಗ್ಯೂ, ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸುವ ಉದ್ದೇಶವಿಲ್ಲಆದರೆ ಅವರು ನಿರಪರಾಧಿಗಳಲ್ಲ ಮತ್ತು ಅವರ ಹೆಸರನ್ನು ಡಿಜಿಎಂಇ ಶಿಫಾರಸು ಮಾಡಿಲ್ಲ ಎಂದು ಕಂಡುಬಂದ ಕಾರಣ ಅವರ ಎಂಬಿಬಿಎಸ್ ಕೋರ್ಸ್ ನಂತರ 2 ವರ್ಷಗಳ ಸಮುದಾಯ ಸೇವೆ ಮಾಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

"ಮೂರನೇ ಪ್ರತಿವಾದಿ (ಎಂಸಿಐ) ನಿಗದಿಪಡಿಸದ ವಿದ್ಯಾರ್ಥಿಗಳಿಂದ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎಂಬ ಅರಿವಿದ್ದರೂ ಕಾಲೇಜು 132 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದೆ. 2017-2018ರ ಶೈಕ್ಷಣಿಕ ವರ್ಷಕ್ಕೆ ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್‌ನಲ್ಲಿ 132 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಕಾಲೇಜಿನ ಉದ್ದೇಶಪೂರ್ವಕ ನಿಯಮಗಳ ಉಲ್ಲಂಘನೆಯನ್ನು ಕ್ಷಮಿಸಲಾಗುವುದಿಲ್ಲ ಅದಕ್ಕಾಗಿ ಇಂದಿನಿಂದ 8 ವಾರಗಳ ಅವಧಿಯಲ್ಲಿ ಈ ನ್ಯಾಯಾಲಯದ ನೋಂದಾವಣೆಯಲ್ಲಿ 5 ಕೋಟಿ ರೂ. ದಂಡ ಪಾವತಿಸಬೇಕು. ಆದರೆ ಇದಕ್ಕಾಗಿ ಯಾವುದೇ ರೀತಿಯಿಂದ ವಿದ್ಯಾರ್ಥಿಗಳಿಂದ ಮೊತ್ತವನ್ನು ವಸೂಲಿ ಮಾಡಬಾರದು" ಎಂದು ಸುಪ್ರೀಂ ಕೋರ್ಟ್ ವೈದ್ಯಕೀಯ ಕಾಲೇಜಿಗೆ ನಿರ್ದೇಶನ ನೀಡಿತು.

ಇದಲ್ಲದೆ ಪ್ರವೇಶ ಪಡೆದ ವಿದ್ಯಾರ್ಥಿಗಳು ನಿರಪರಾಧಿಗಳು ಎಂದು ಹೇಳಲಾಗುವುದಿಲ್ಲ ಏಕೆಂದರೆ ಅವರ ಹೆಸರುಗಳನ್ನು ಡಿಜಿಎಂಇ ಶಿಫಾರಸು ಮಾಡಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. "ಕಾಲೇಜಿಗೆ ಅವರ ಪ್ರವೇಶವು ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಿಳಿದಿರಲಿಲ್ಲ ಎನ್ನುವುದನ್ನು ನಾವು ಒಪ್ಪುವುದಿಲ್ಲ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಸೆಪ್ಟೆಂಬರ್ 29, 2017 ರ ಪತ್ರದ ಹೊರತಾಗಿಯೂ, ಕಾಲೇಜು ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿಲ್ಲ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ನಿರ್ದೇಶನವನ್ನು ಈ ನ್ಯಾಯಾಲಯವು ತಡೆಹಿಡಿದಿಲ್ಲ. ಇದರ ಹೊರತಾಗಿಯೂ, ವಿದ್ಯಾರ್ಥಿಗಳು ತಮ್ಮ ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್ ಅನ್ನು ಮುಂದುವರೆಸಿದರು ಮತ್ತು ವಿಶ್ವವಿದ್ಯಾಲಯದಿಂದ ಅನುಮತಿ ಪಡೆದ ನಂತರ ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್ ಪರೀಕ್ಷೆಗಳನ್ನು ಬರೆಯುವಲ್ಲಿ ಯಶಸ್ವಿಯಾದರು.  132 ವಿದ್ಯಾರ್ಥಿಗಳಲ್ಲಿ ಆರು ವಿದ್ಯಾರ್ಥಿಗಳು ತಮ್ಮ ಮೊದಲ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಪ್ರಸ್ತುತ, 126 ವಿದ್ಯಾರ್ಥಿಗಳು ತಮ್ಮ ಎರಡನೇ ವರ್ಷದ ಎಂಬಿಬಿಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿ ಕೋರಿದ್ದಾರೆ. ವಿದ್ಯಾರ್ಥಿಗಳು ಎರಡನೇ ವರ್ಷದ ಎಂಬಿಬಿಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಎಂಬ ಅಂಶವನ್ನು ಗಮನಿಸಿ ಈ ಹಂತದಲ್ಲಿ ಅವರ ಪ್ರವೇಶವನ್ನು ರದ್ದುಗೊಳಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದ ನ್ಯಾಯಪೀಠ  ತಮ್ಮ ಎಂಬಿಬಿಎಸ್ ಕೋರ್ಸ್ ಮುಗಿಸಿದ ನಂತರ ಎರಡು ವರ್ಷಗಳ ಅವಧಿಗೆ ಸಮುದಾಯ ಸೇವೆ ಮಾಡಲು ನಿರ್ದೇಶಿಸಿದೆ.

132 ವಿದ್ಯಾರ್ಥಿಗಳಿಂದ ಸಲ್ಲಿಕೆಯಾಗಬೇಕಾದ ಮುದಾಯ ಸೇವೆಯ ವಿಧಾನಗಳನ್ನು ಎನ್‌ಎಂಸಿ ನಿರ್ಧರಿಸುತ್ತದೆ ಮತ್ತು ತಾಲೀಮು ನೀಡುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp