ಉತ್ತರ ಪ್ರದೇಶ: ಸುಟ್ಟ ಗಾಯಗಳಿಂದ ಅರೆನಗ್ನ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಪತ್ತೆ

ಶಹಜನಾಪುರದ ಕಾಲೇಜು ಕ್ಯಾಂಪಸ್ ನಿಂದ  ಸೋಮವಾರ ನಾಪತ್ತೆಯಾಗಿದ್ದ 21 ವರ್ಷದ ವಿದ್ಯಾರ್ಥಿನಿ, ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಬಳಿ ಸುಟ್ಟ ಗಾಯಗಳಿಂದ ಅರೆ ನಗ್ನಾವಸ್ಥೆಯಲ್ಲಿ ಸಿಕ್ಕಿದ್ದಾಳೆ.

Published: 24th February 2021 11:41 AM  |   Last Updated: 24th February 2021 12:49 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಲಕ್ನೋ:  ಶಹಜನಾಪುರದ ಕಾಲೇಜು ಕ್ಯಾಂಪಸ್ ನಿಂದ ಸೋಮವಾರ ನಾಪತ್ತೆಯಾಗಿದ್ದ 21 ವರ್ಷದ ವಿದ್ಯಾರ್ಥಿನಿ, ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಬಳಿ ಸುಟ್ಟ ಗಾಯಗಳಿಂದ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ.

ತನ್ನ ಸ್ನೇಹಿತೆಯ ಬಾವ ಕರೆ ಮಾಡಿದ್ದರಿಂದ ಹೋಗಿದ್ದಾಗಿ, ಆದರೆ ಅವಳನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದ್ದಾಗಿ, ಹೇಗೋ ತಪ್ಪಿಸಿಕೊಂಡಿದ್ದಾಗಿ ಆಕೆ ಹೇಳಿದ್ದಾಳೆ.

ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ನಡೆಸುತ್ತಿರುವ ಮುಮುಕ್ಷು ಆಶ್ರಮದ ಆಶ್ರಯದಲ್ಲಿ ಬಾಲಕಿ ಎಸ್‌ಎಸ್ ಕಾಲೇಜಿನಲ್ಲಿ ಪದವಿಪೂರ್ವ ಕೋರ್ಸ್ ಓದುತ್ತಿದ್ದಳು.

ತನ್ನ ಸ್ನೇಹಿತೆ ಪಿಂಕಿಯ ಬಾವ ಮನೀಶ್ ಕರೆ ಮಾಡಿದ್ದರಿಂದ ಹೋಗಿದ್ದಾಗಿ ಪ್ರಜ್ಞೆ ಬಂದ ಬಳಿಕ ಯುವತಿ ತಿಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಈ ಕೃತ್ಯ ನಡೆದಿದೆ ಎಂದು ತಿಳಿದಿಲ್ಲ, ಯುವತಿಯ ಹೇಳಿಕೆಗಳು ಸಮಂಜಸವಾಗಿಲ್ಲ, ಪಿಂಕಿಗೆ ಈ ಎಲ್ಲಾ ವಿಷಯ ತಿಳಿದಿದೆ ಎಂದು ಹೇಳಿದ್ದಾಳೆ, ಆದರೆ ಪಿಂಕಿ ಈ ವಿಷಯವನ್ನು ನಿರಾಕರಿಸಿದ್ದಾಳೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp