ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಐವರು ಸಾವು, 17 ಮಂದಿಗೆ ಗಾಯ

ಶಿವಕಾಶಿ ತಾಲ್ಲೂಕಿನ ಕಲೈಯರ್ಕುರಿಚಿ ಗ್ರಾಮದ ಥಾಂಕಾರಜ್‌ಪಾಂಡಿಯನ್ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದಾರೆ.

Published: 25th February 2021 10:22 PM  |   Last Updated: 25th February 2021 10:24 PM   |  A+A-


ಸ್ಫೋಟದ ಸ್ಥಳದಲ್ಲಿ ಅಧಿಕಾರಿಗಳ ತಪಾಸಣೆ

Posted By : Raghavendra Adiga
Source : The New Indian Express

ವಿರುಡುನಗರ್(ತಮಿಳುನಾಡು): ಶಿವಕಾಶಿ ತಾಲ್ಲೂಕಿನ ಕಲೈಯರ್ಕುರಿಚಿ ಗ್ರಾಮದ ಥಾಂಕಾರಜ್‌ಪಾಂಡಿಯನ್ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದಾರೆ.

ಘಟಕದ ಮಾಲೀಕ ಥಾಂಕಾರಜ್ (52) ಎಂ ಪುದುಪಟ್ಟಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

ಮೃತರಲ್ಲಿ ಒಬ್ಬನನ್ನು ಮಾತ್ರ - ಎಲಿನೈಕನ್ಪಟ್ಟಿಯ ಸೆಲ್ವಿ (37) ಎಂದು ಗುರುತಿಸಲಾಗಿದ್ದು ಇತರರ ಗುರುತು ಪತ್ತೆಯಾಗಿಲ್ಲ. ಶೇ.100ರಷ್ಟು ಸುಟ್ಟ ಗಾಯಗಳೊಂದಿಗೆ 75 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಶಿವಕಾಶಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರವಾನಗಿ ಪಡೆದ ಘಟಕದ 20 ಕೊಠಡಿಗಳಲ್ಲಿ 15 ಕೊಠಡಿಗಳು ಸಂಪೂರ್ಣವಾಗಿ ಹಾನಿಗೊಂಡಿವೆ.

ಅಪಘಾತದ ಸ್ಥಳದಿಂದ 10 ಕಿ.ಮೀ ದೂರದಲ್ಲಿರುವ ಅಮತೂರ್ ಗ್ರಾಮದಲ್ಲಿ ಸಹ ಸ್ಫೋಟ ಮತ್ತು ಕಂಪನಗಳ ಶಬ್ದ ಕೇಳಿಬಂದಿದೆ. ಘಟನಾ ಸ್ಥಳದಲ್ಲಿ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಲಾಗಿದ್ದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ (ಡಿಎಫ್‌ಒ) ಗಣೇಶನ್ ಅವರ ನಿರ್ದೇಶನದಂತೆ ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು ಮತ್ತು 50 ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆ ನಡೆಯುತ್ತಿದ್ದು ಸ್ಫೋಟದ ಕಾರಣ ಪತ್ತೆಯಾಗಿಲ್ಲ. ಜಿಲ್ಲಾಧಿಕಾರಿ ಆರ್ ಕಣ್ಣನ್ ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. 

ಫೆಬ್ರವರಿ 13 ರಂದು ಜಿಲ್ಲೆಯ ಅಚಂಕುಲಂ  ಗ್ರಾಮದ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 23 ಮಂದಿ ಸಾವನ್ನಪ್ಪಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp