ಎಲ್ಒಸಿ ಒಪ್ಪಂದಗಳ ಕಟ್ಟುನಿಟ್ಟಿನ ಪಾಲನೆಗೆ ಭಾರತ-ಪಾಕಿಸ್ತಾನ ಒಪ್ಪಿಗೆ

ಮಹತ್ವದ ಬೆಳವಣಿಗೆಯಲ್ಲಿ ಭಾರತ-ಪಾಕಿಸ್ತಾನ ಫೆ.25 ರಂದು ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ತೊಡಗಿದ್ದು, ಎಲ್ಒಸಿ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿವೆ. 

Published: 25th February 2021 04:17 PM  |   Last Updated: 25th February 2021 04:17 PM   |  A+A-


ಭಾರತ-ಪಾಕಿಸ್ತಾನ

Posted By : Srinivas Rao BV
Source : The New Indian Express

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ-ಪಾಕಿಸ್ತಾನ ಫೆ.25 ರಂದು ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ತೊಡಗಿದ್ದು, ಎಲ್ಒಸಿ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿವೆ. 

"ಉಭಯ ದೇಶಗಳೂ ಎಲ್ಲಾ ಒಪ್ಪಂದಗಳು, ಕದನವಿರಾಮ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿವೆ, ಇದು ಫೆ.24/25 ರಿಂದಲೇ ಜಾರಿಗೆ ಬರಲಿದೆ" ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

"ಪರಸ್ಪರ ಫಲಕಾರಿಯಾಗುವ ಹಾಗೂ ಗಡಿಯಾದ್ಯಂತ ಸ್ಥಿರ ಶಾಂತಿಯನ್ನು ನೀಡುವ ನಿಟ್ಟಿನಲ್ಲಿ ಡಿಜಿಎಂಒಗಳು ಪರಸ್ಪರ ಆತಂಕಕಾರಿಯಾಗುವ ಅಂಶಗಳನ್ನು ಚರ್ಚಿಸಿ, ಅವುಗಳ ಬಗ್ಗೆ ನಿಗಾ ವಹಿಸುವುದಕ್ಕೆ ಒಪ್ಪಿಕೊಂಡಿದ್ದಾರೆ" 

ಊಹೆ ಮಾಡದ ಪರಿಸ್ಥಿತಿಗಳು ಎದುರಾದಲ್ಲಿ ಅದನ್ನು ನಿಭಾಯಿಸುವುದಕ್ಕೆ ಹಾಟ್ ಲೈನ್ ಸಂಪರ್ಕ ಹಾಗೂ ಗಡಿ ಧ್ವಜ ಸಭೆಗಳನ್ನು ಬಳಕೆ ಮಾಡಿಕೊಳ್ಳುವುದಾಗಿ ಜಂಟಿ ಹೇಳಿಕೆಯಲ್ಲಿ ಉಭಯ ದೇಶಗಳೂ ತಿಳಿಸಿವೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp