ಒಲಿದ ಅದೃಷ್ಟಲಕ್ಷ್ಮಿ! 100 ರೂ. ಲಾಟರಿ ಟಿಕೆಟ್ ಕೊಂಡು ಕೋಟ್ಯಾಧಿಪತಿಯಾದ ಪಂಜಾಬ್ ಗೃಹಿಣಿ

ಕೇವಲ 100 ರೂ.ಗೆ ಕೊಂಡ ಲಾಟರಿ ಟಿಕೆಟ್ ನಿಂದ ಅಮೃತಸರದ ಗೃಹಿಣಿಯೊಬ್ಬರು 1 ಕೋಟಿ ರೂ.ಗಳ ಅಭುಮಾನ ಗಳಿಸಿದ್ದಾರೆ.

Published: 25th February 2021 08:22 PM  |   Last Updated: 25th February 2021 08:22 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : ANI

ಚಂಡೀಘರ್: ಕೇವಲ 100 ರೂ.ಗೆ ಕೊಂಡ ಲಾಟರಿ ಟಿಕೆಟ್ ನಿಂದ ಅಮೃತಸರದ ಗೃಹಿಣಿಯೊಬ್ಬರು 1 ಕೋಟಿ ರೂ.ಗಳ ಅಭುಮಾನ ಗಳಿಸಿದ್ದಾರೆ.

ರಾಜ್ಯ ಸರ್ಕಾರದ ಹೇಳಿಕೆಯ ಪ್ರಕಾರ, ಅದೃಷ್ಟಶಾಲಿ ವಿಜೇತೆ ರೇಣು ಚೌಹಾನ್ ಅವರು ಗುರುವಾರ ಟಿಕೆಟ್ ಮತ್ತು ಅಗತ್ಯವಿರುವ ದಾಖಲೆಗಳನ್ನು ರಾಜ್ಯ ಲಾಟರಿ ಇಲಾಖೆಗೆ ಸಲ್ಲಿಸಿದರು.

ತಮಗೆ ಬಹುಮಾನ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಚೌಹಾನ್, ಭಗವಂತನ ಆಶೀರ್ವಾದ ತನ್ನ ಮಧ್ಯಮ ವರ್ಗದ ಕುಟುಂಬಕ್ಕೆ ಇದು ಬಹಳ ಸಹಾಯಕವಾಗಿದೆ ಎಂದಿದ್ದಾರೆ. "ನನ್ನ ಪತಿ ಅಮೃತಸರದಲ್ಲಿ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ ಮತ್ತು ಈ ಬಂಪರ್ ಬಹುಮಾನದ ಹಣವು ನಮ್ಮ ಕುಟುಂಬವು ಸುಗಮ ಜೀವನವನ್ನು ನಡೆಸಲು ಉತ್ತಮ ಮೊತ್ತವಾಗಲಿದೆ." ಅವರು ಹೇಳಿದ್ದಾರೆ.

ಫೆಬ್ರವರಿ 11 ರಂದು ಪಂಜಾಬ್ ಸ್ಟೇಟ್ ಡಿಯರ್ 100 + ಮಾಸಿಕ ಲಾಟರಿಯ ಫಲಿತಾಂಶಗಳನ್ನು ಡ್ರಾದಲ್ಲಿ ಘೋಷಿಸಲಾಗಿದೆ ಎಂದು ಪಂಜಾಬ್ ರಾಜ್ಯ ಲಾಟರಿ ಇಲಾಖೆಯ ಅಧಿಕೃತ ವಕ್ತಾರರು ಮಾಹಿತಿ ನೀಡಿದರು.

"ಟಿಕೆಟ್ ಡಿ -12228 ವಿಜೇತೆ  ರೇಣು ಅವರು ಇಂದು ದಾಖಲೆಗಳನ್ನು ಸಲ್ಲಿಸಿದ್ದಾರೆ ಮತ್ತು ಬಹುಮಾನದ ಹಣವನ್ನು ಶೀಘ್ರದಲ್ಲೇ ವಿಜೇತರ ಖಾತೆಗೆ ಜಮಾ ಮಾಡಲಾಗುವುದು" ಎಂದು ಅಧಿಕಾರಿ ತಿಳಿಸಿದ್ದಾರೆ

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp