ವಿಡಿಯೋ: ಮಮತಾ ಎಲೆಕ್ಟ್ರಿಕ್ ಸ್ಕೂಟರ್ ಸವಾರಿ, ತೈಲ ಬೆಲೆ ಏರಿಕೆ ವಿರುದ್ಧ ದೀದಿ ಪ್ರತಿಭಟನೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಏರಿಕೆ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Published: 25th February 2021 02:32 PM  |   Last Updated: 25th February 2021 02:37 PM   |  A+A-


mamata-24

ಮಮತಾ ಬ್ಯಾನರ್ಜಿ

Posted By : Lingaraj Badiger
Source : PTI

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಏರಿಕೆ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಮಮತಾ ಬ್ಯಾನರ್ಜಿ ಅವರು ಇಂದು ರಾಜ್ಯ ಸಚಿವಾಲಯ ನಬಣ್ಣಾಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಗಮಿಸುವ ಮೂಲಕ ಎಲ್ಲರ ಗಮನೆ ಸೆಳೆದರು.

ಸಚಿವ ಫಿರ್ಹಾದ್ ಹಕೀಮ್ ಅವರು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿದರೆ, ಮಮತಾ ಬ್ಯಾನರ್ಜಿ ಅವರ ಹಿಂದೆ ಕುಳಿತಿದ್ದರು.

ಮಮತಾ ಬ್ಯಾನರ್ಜಿ ಅವರು ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಗ್ಯಾಸ್ ದರ ಏರಿಕೆ ವಿರುದ್ಧದ ಪ್ಲೇಕಾರ್ಡ್ ಅನ್ನು ಕುತ್ತಿಗೆಗೆ ನೇತುಹಾಕಿಕೊಂಡು ಸ್ಕೂಟರ್ ನಲ್ಲಿ ಕುಳಿತಿದ್ದರು. ಹೆಲ್ಮೆಟ್ ಸಹ ಧರಿಸಿದ್ದ ಸಿಎಂ ಹಜ್ರಾ ಮೋರ್‌ನಿಂದ ರಾಜ್ಯ ಸಚಿವಾಲಯದವರೆಗೆ ಸುಮಾರು ಐದು ಕಿ.ಮೀ ಸ್ಕೂಟರ್ ನಲ್ಲಿ ಪ್ರಯಾಣಿಸಿದರು.

ನಬಣ್ಣಾ ತಲುಪಿದ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಸಿಎಂ, "ನಾವು ತೈಲ ಬೆಲೆ ಏರಿಕೆಯನ್ನು ವಿರೋಧಿಸುತ್ತಿದ್ದೇವೆ. ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತದೆ. ತೈಲ ಬೆಲೆಗಳನ್ನು ತಗ್ಗಿಸಲು ಅವರು ಏನೂ ಮಾಡಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಮತ್ತು ನಂತರದ ಪೆಟ್ರೋಲ್ ಬೆಲೆಯಲ್ಲಿನ ವ್ಯತ್ಯಾಸವನ್ನು ನೀವು ನೋಡಬಹುದು" ಎಂದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp