ಗುಜರಾತ್ ನಲ್ಲಿ ಎಎಪಿಗೆ ಜನರ ಮತ: ಬಿಜೆಪಿ, ಕಾಂಗ್ರೆಸ್ ಗೆ ಭಯ ಶುರುವಾಗಿದೆ ಎಂದ ಅರವಿಂದ್ ಕೇಜ್ರಿವಾಲ್

ಗುಜರಾತ್  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕುವ ಜನರಿಂದಾಗಿ ಬಿಜೆಪಿ, ಕಾಂಗ್ರೆಸ್ ಭಯಭೀತಿಗೊಂಡಿವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಘಟಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

Published: 26th February 2021 03:01 PM  |   Last Updated: 26th February 2021 03:15 PM   |  A+A-


Arvind_kejriwal1

ಅರವಿಂದ್ ಕೇಜ್ರಿವಾಲ್

Posted By : Nagaraja AB
Source : The New Indian Express

ಸೂರತ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕುವ ಜನರಿಂದಾಗಿ ಬಿಜೆಪಿ, ಕಾಂಗ್ರೆಸ್ ಭಯಭೀತಿಗೊಂಡಿವೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಘಟಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ನೂತನವಾಗಿ ಆಯ್ಕೆಯಾದ ಕಾರ್ಪೋರೇಟರ್ ಗಳನ್ನು ಕುರಿತು ಭಾಷಣ ಮಾಡಿದ ಕೇಜ್ರಿವಾಲ್, ಚುನಾವಣಾ ಫಲಿತಾಂಶದ ಕೆಲವು ದಿನಗಳ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹೇಳಿಕೆಗಳನ್ನು ಕೇಳಿದ್ದೇನೆ. ಅವರು ಸ್ವಲ್ಪ ಭೀತಿಗೊಂಡಿದ್ದಾರೆ. ಅವರು ಎಎಪಿ ಅಥವಾ ನೂತನವಾಗಿ ಚುನಾಯಿತಗೊಂಡವರಿಂದ ಭಯಭೀತಿಗೊಂಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ, ಎಎಪಿಗೆ ಮತ ಹಾಕುವ ಜನರಿಂದಾಗಿ ಭಯಭೀತಿಗೊಂಡಿದ್ದಾರೆ ಎಂದರು. 

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಕಾರ್ಪೋರೇಟರ್ ಗಳು ಮತ್ತು ಸ್ವಯಂ ಸೇವಕರನ್ನು ಭೇಟಿಯಾದ ಕೇಜ್ರಿವಾಲ್, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿಯೇ ಆಡಳಿತ ನಡೆಸಲು ಕಾರಣವೇನು ಎಂದು ಪ್ರಶ್ನಿಸಿದರು.

ಕಳೆದ 25 ವರ್ಷಗಳಿಂದಲೂ ಬಿಜೆಪಿಯೇ ಏಕೆ ಆಡಳಿತ ನಡೆಸುತ್ತಿದೆ?ಅವರು ದೊಡ್ಡದಾಗಿ ಏನು ಮಾಡಿಲ್ಲ.ಆದರೆ, ಅಲ್ಲಿ ಪ್ರತಿಪಕ್ಷವಿಲ್ಲ, ರಾಜ್ಯದ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಬಿಜೆಪಿ ವಿರುದ್ಧ ಎಎಪಿಯೇ ಸೂಕ್ತ ಎಂಬುದಾಗಿ ತೀರ್ಮಾನಿಸಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.

120 ಸ್ಥಾನಗಳಿಗೆ ನಡೆದ ಸೂರತ್  ನಗರಸಭಾ ಚುನಾವಣೆಯಲ್ಲಿ  27 ಸ್ಥಾನಗಳಲ್ಲಿ ಎಎಪಿ ಗೆಲುವು ಸಾಧಿಸಿದರೆ, ಬಿಜೆಪಿ 93 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕಾಂಗ್ರೆಸ್ ಮತ್ತಿತರ ಪಕ್ಷಗಳು ಯಾವುದೇ ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp