ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ: ಚೀನಾಗೆ ಭಾರತ

ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಗಡಿಭಾಗದಲ್ಲಿ ಶಾಂತಿ ಮತ್ತು ಭಾತೃತ್ವ ಅಗತ್ಯ ಎಂದು ಪ್ರತಿಪಾದಿಸಿರುವ ಭಾರತ, ಸೇನಾಪಡೆಗಳು ಮತ್ತೆ ಘರ್ಷಣಾ ಪ್ರದೇಶದಲ್ಲಿ ಸಕ್ರಿಯವಾಗದಂತೆ ನೋಡಿಕೊಳ್ಳಲು ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ ಎಂದು ಹೇಳಿದೆ.

Published: 26th February 2021 02:17 PM  |   Last Updated: 26th February 2021 02:17 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ನವದೆಹಲಿ/ಬೀಜಿಂಗ್: ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಗಡಿಭಾಗದಲ್ಲಿ ಶಾಂತಿ ಮತ್ತು ಭಾತೃತ್ವ ಅಗತ್ಯ ಎಂದು ಪ್ರತಿಪಾದಿಸಿರುವ ಭಾರತ, ಸೇನಾಪಡೆಗಳು ಮತ್ತೆ ಘರ್ಷಣಾ ಪ್ರದೇಶದಲ್ಲಿ ಸಕ್ರಿಯವಾಗದಂತೆ ನೋಡಿಕೊಳ್ಳಲು ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ ಎಂದು ಹೇಳಿದೆ.

ಪೂರ್ವ ಲಡಾಕ್ ನ ಪಾಂಗೊಂಗ್ ತ್ಸೊ ಸರೋವರ ತೀರದ ಉತ್ತರ ಮತ್ತು ದಕ್ಷಿಣ ಭಾಗದಿಂದ ಕಳೆದ ವಾರ ಎರಡೂ ದೇಶಗಳ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಈ ಪ್ರದೇಶಗಳಲ್ಲಿ ಸೇನೆ ನಿಯೋಜನೆಗೊಂಡಿದ್ದವು.

ಸೇನೆ ಹಿಂಪಡೆಯುವಿಕೆಗೆ ಸಂಬಂಧಪಟ್ಟಂತೆ ನಿನ್ನೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡೆಸಿದ್ದ ಸುಮಾರು 75 ನಿಮಿಷಗಳ ದೂರವಾಣಿ ಸಂಭಾಷಣೆಯ ವಿವರ ಬಹಿರಂಗಪಡಿಸಿರುವ ವಿದೇಶಾಂಗ ಸಚಿವಾಲಯ, ಪೂರ್ವ ಲಡಾಕ್ ಗಡಿಭಾಗದಲ್ಲಿ ಸೇನೆ ನಿಯೋಜನೆಯಿಂದ ದ್ವಿಪಕ್ಷೀಯ ಸಂಬಂಧಗಳಿಗೆ ಪರಿಣಾಮ ಬೀರಿದೆ ಎಂದು ಚೀನಾಕ್ಕೆ ತಿಳಿಸಲಾಗಿದೆ ಎಂದಿದೆ.

ಗಡಿ ಸಮಸ್ಯೆಯನ್ನು ಪರಿಹರಿಸಲು ಸಮಯ ತೆಗೆದುಕೊಳ್ಳಬಹುದು ಆದರೆ ಹಿಂಸಾಚಾರ ಸೇರಿದಂತೆ ಶಾಂತಿ ಮತ್ತು ಭಾತೃತ್ವ ಭಂಗವು ಅನಿವಾರ್ಯವಾಗಿ ಸಂಬಂಧದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ ಎಂದು ವಿದೇಶಾಂಗ ಸಚಿವರು ಚೀನಾಕ್ಕೆ ತಿಳಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಗಡಿ ಸಂಬಂಧ ವಿಚಾರವಾಗಿ ನಿರಂತರ ಸಂಪರ್ಕದಲ್ಲಿರಲು ಎರಡೂ ದೇಶಗಳ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಭಯ ನಾಯಕರು ನಿನ್ನೆ ಗಡಿ ವಾಸ್ತವ ರೇಖೆಯಲ್ಲಿನ ಪರಿಸ್ಥಿತಿ, ಭಾರತ-ಚೀನಾ ಸಂಬಂಧಗಳ ಒಟ್ಟಾರೆ ವಿಚಾರಗಳನ್ನು ಚರ್ಚಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp