ತಮಿಳು ನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರಬಲ ವ್ಯಕ್ತಿ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ: ಪ್ರಧಾನಿ ಮೋದಿ 

ತಮಿಳು ನಾಡು ವಿಧಾನಸಭೆ ಚುನಾವಣಾ ಕಣ ರಂಗೇರಿದೆ, ಕೊಯಮತ್ತೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷ ಡಿಎಂಕೆ ವಿರುದ್ಧ ಟೀಕಿಸಿದ್ದಾರೆ.

Published: 26th February 2021 08:29 AM  |   Last Updated: 26th February 2021 08:29 AM   |  A+A-


Prime Minister Narendra Modi being presented a memento by Chief Minister of Tamil Nadu Edappadi K. Palaniswami

ಪ್ರಧಾನಿ ಮೋದಿಗೆ ಸ್ಮರಣಿಕೆ ನೀಡಿ ಗೌರವಿಸಿದ ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ

Posted By : Sumana Upadhyaya
Source : The New Indian Express

ಕೊಯಂಬತ್ತೂರು: ತಮಿಳು ನಾಡು ವಿಧಾನಸಭೆ ಚುನಾವಣಾ ಕಣ ರಂಗೇರಿದೆ, ಕೊಯಮತ್ತೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷ ಡಿಎಂಕೆ ವಿರುದ್ಧ ಟೀಕಿಸಿದ್ದಾರೆ.

ಡಿಎಂಕೆ ಅಧಿಕಾರಕ್ಕೆ ಬಂದಾಗಲೆಲ್ಲಾ ಬಲಿಷ್ಠ ವ್ಯಕ್ತಿಯ ಸಂಸ್ಕೃತಿಗೆ ಒತ್ತು ನೀಡುತ್ತದೆ ಎಂದು ಹೇಳಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೂಡ ಡಿಎಂಕೆ ಸಮಾಜ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದ್ದು ಅದು ಮುಗ್ಧ ನಾಗರಿಕರಿಗೆ ತೊಂದರೆಯನ್ನುಂಟುಮಾಡುತ್ತದೆ. ಡಿಎಂಕೆ ಕಾರ್ಯಕರ್ತರು ಹಣ ಸುಲಿಗೆ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ತಮಿಳು ನಾಡಿನಲ್ಲಿ ಮಹಿಳೆಯರು ಬಹಳ ತೊಂದರೆಗೊಳಗಾಗುತ್ತಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು.

ಅವರು ನಿನ್ನೆ ಕೊಯಮತ್ತೂರಿನ ಕೊಡಿಸ್ಸಿಯಾ ಮೈದಾನದಲ್ಲಿ ತಮಿಳು ನಾಡು ವಿಧಾನಸಭೆ ಚುನಾವಣಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡಿಎಂಕೆ ಯಾವ ರೀತಿ ನಡೆಸಿಕೊಂಡಿತ್ತು ಎಂದು ತಮಿಳು ನಾಡು ಜನತೆಗೆ ಗೊತ್ತಿದೆ. ಮಹಿಳೆಯರ ಬಗ್ಗೆ ಡಿಎಂಕೆಗೆ ಯಾವ ರೀತಿ ಭಾವನೆಯಿದೆ ಎಂಬುದನ್ನು ಇದು ತೋರಿಸುತ್ತದೆ. ಜಯಲಲಿತಾ ಅವರಿಗೆ ತೊಂದರೆ ಕೊಟ್ಟವರನ್ನು ಡಿಎಂಕೆ ಮತ್ತು ಕಾಂಗ್ರೆಸ್ ಗೌರವಿಸುತ್ತಿದೆ. ಡಿಎಂಕೆ ಆಡಳಿತದಲ್ಲಿ ರಾಜ್ಯದ ಜನತೆಗೆ ಆಗುತ್ತಿದ್ದ ದೀರ್ಘಾವಧಿಯ ವಿದ್ಯುತ್ ಕಡಿತವನ್ನು ಮರೆಯಲು ಸಾಧ್ಯವೇ ಎಂದು ಕೇಳಿದರು.

ಇಂದು ದೇಶ ಎರಡು ವಿಭಿನ್ನ ರೀತಿಯ ರಾಜಕೀಯ ನೋಡುತ್ತಿದೆ. ಭ್ರಷ್ಟಾಚಾರಪೀಡಿತ ಪ್ರತಿಪಕ್ಷದ ದುರಾಡಳಿತ ಮತ್ತು ಸಹಾನುಭೂತಿಯ ಎನ್ ಡಿಎ ಆಡಳಿತ. ಎರಡೂ ಬಹಳ ವಿಭಿನ್ನ ರೀತಿಯ ಆಡಳಿತ ಎಂದರು.

ಪ್ರತಿಪಕ್ಷಗಳಿಗೆ ಮುಖ್ಯವಾದುದು ವೈಯಕ್ತಿಕ ಲಾಭಗಳು. ಅವರು ತಮ್ಮ ಜೇಬುಗಳನ್ನು ತುಂಬಲು ಶಕ್ತಿಯನ್ನು ಸೆರೆಹಿಡಿಯಲು ಬಯಸುತ್ತಾರೆ. ಡಿಎಂಕೆ ಮತ್ತು ಕಾಂಗ್ರೆಸ್ ಸಭೆಗಳು ಭ್ರಷ್ಟಾಚಾರದ ಹ್ಯಾಕಥಾನ್‌ನಂತಿದೆ. ಅವರ ನಾಯಕರು ಕುಳಿತು ಲೂಟಿ ಮಾಡುವುದು ಹೇಗೆ ಎಂದು ಬುದ್ದಿಮತ್ತೆ ಮಾಡುತ್ತಾರೆ. ಹೆಚ್ಚು ನವೀನ ಮಾರ್ಗಗಳನ್ನು ನೀಡುವವರಿಗೆ ಹುದ್ದೆಗಳು ಮತ್ತು ಸಚಿವಾಲಯಗಳನ್ನು ನೀಡಲಾಗುತ್ತದೆ. ರಾಜಕೀಯದ ವಿರೋಧಿ ಶೈಲಿಯು ಬೆದರಿಸುವ ಮತ್ತು ಕಿರುಕುಳವನ್ನು ಆಧರಿಸಿದೆ ಎಂದು ಪ್ರಧಾನಿ ಆರೋಪಿಸಿದರು.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp