ಮಾರ್ಚ್ ಅಂತ್ಯದವರೆಗೂ ಈಗಿರುವ ಕೋವಿಡ್-19 ಮಾರ್ಗಸೂಚಿಗಳೇ ಮುಂದುವರಿಕೆ- ಗೃಹ ಸಚಿವಾಲಯ 

ಮಾರ್ಚ್ 31ರವರೆಗೂ ಈಗಿರುವ ಕೋವಿಡ್-19 ಮಾರ್ಗಸೂಚಿಗಳೇ ಮುಂದುವರೆಯಲಿವೆ ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

Published: 26th February 2021 08:22 PM  |   Last Updated: 26th February 2021 08:22 PM   |  A+A-


Casual_Photos1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಮಾರ್ಚ್ 31ರವರೆಗೂ ಈಗಿರುವ ಕೋವಿಡ್-19 ಮಾರ್ಗಸೂಚಿಗಳೇ ಮುಂದುವರೆಯಲಿವೆ ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

ಹೊಸ ಪ್ರಕರಣಗಳು ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಇಳಿಕೆ ಕಂಡುಬರುತ್ತಿರುವಂತೆಯೇ, ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ನಿವಾರಿಸಲು  ಜಾಗ್ರತೆ, ನಿರ್ಬಂಧ ಮತ್ತು ಮುನ್ನೆಚ್ಚರಿಕೆ  ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿಕೆಯಲ್ಲಿ  ತಿಳಿಸಿದೆ.

ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಲಸಿಕೆ ನೀಡುವ ಉದ್ದೇಶಿತ ಗುರಿಯನ್ನು  ಹೆಚ್ಚಿಸುವಂತೆ  ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಸೂಚಿಸಲಾಗಿದೆ.ಕಂಟೈನ್ ಮೆಂಟ್ ವಲಯಗಳನ್ನು ಎಚ್ಚರಿಕೆಯಿಂದ ಗುರುತಿಸುವಿಕೆ, ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದು, ವಿವಿಧ ಅನುಮತಿಸಲಾದ ಚಟುವಟಿಕೆಗಳನ್ನು ಮಾರ್ಗಸೂಚಿಗಳ ಅನ್ವಯ ಮುಂದುವರೆಸುವಂತೆ ಗೃಹ ಸಚಿವಾಲಯ ತಿಳಿಸಿದೆ.

ಕೋವಿಡ್- 19 ಸಾಂಕ್ರಾಮಿಕ ನಿಯಂತ್ರಣ, ಹರಡುವಿಕೆಯನ್ನು ತಡೆಗಟ್ಟಲು ಜನವರಿ 27 ರಂದು ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನೇ ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಸೂಚಿಸಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp