ಹಾಸ್ಯಪ್ರಜ್ಞೆ, ನೈತಿಕತೆ ಉಳಿಸಿಕೊಂಡು ರೋಗಿಗಳಿಗೆ ಸೇವೆ ನೀಡಿ: ಡಾ. ಎಂ.ಜಿ.ಆರ್. ವಿವಿ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಕಿವಿ ಮಾತು

ಮಹಿಳೆಯರು ವಿಭಿನ್ನ ಕ್ಷೇತ್ರಗಳಲ್ಲಿ ದೇಶವನ್ನು ಮುನ್ನಡೆಸುವುದನ್ನು ನೋಡಲು ನಿಜಕ್ಕೂ ಸಂತೋಷವಾಗುತ್ತದೆ. ಇದು ನಡೆದಾಗ ದೇಶಕ್ಕೆ ಹೆಮ್ಮೆಯ, ಸಂತೋಷದ ಕ್ಷಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Published: 26th February 2021 01:45 PM  |   Last Updated: 26th February 2021 01:53 PM   |  A+A-


PM Narendra Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted By : Sumana Upadhyaya
Source : PTI

ನವದೆಹಲಿ: ಮಹಿಳೆಯರು ವಿಭಿನ್ನ ಕ್ಷೇತ್ರಗಳಲ್ಲಿ ದೇಶವನ್ನು ಮುನ್ನಡೆಸುವುದನ್ನು ನೋಡಲು ನಿಜಕ್ಕೂ ಸಂತೋಷವಾಗುತ್ತದೆ. ಇದು ನಡೆದಾಗ ದೇಶಕ್ಕೆ ಹೆಮ್ಮೆಯ, ಸಂತೋಷದ ಕ್ಷಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ತಮಿಳು ನಾಡಿನ ಡಾ ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನ ಮಂತ್ರಿ ತಮಿಳು ನಾಡಿನ ಖ್ಯಾತ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರನ್ನು ನೆನಪು ಮಾಡಿಕೊಂಡರು. ಇಂದು ಡಾ ರಾಮಚಂದ್ರನ್ ಅವರು ಇರುತ್ತಿದ್ದರೆ ತಮ್ಮ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಪಡುತ್ತಿದ್ದರು. ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಮಹಿಳಾ ಸಶಕ್ತೀಕರಣದಂತಹ ವಿಷಯಗಳು ನನಗೆ ಬಹಳ ಹತ್ತಿರ ಎಂದರು.

ಕೋವಿಡ್-19 ಸಾಂಕ್ರಾಮಿಕವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಭಾರತೀಯ ಆರೋಗ್ಯ ಸೇವೆ ಮತ್ತು ವೈದ್ಯರು ಮತ್ತು ವಿಜ್ಞಾನಿಗಳ ಬಗ್ಗೆ ವಿಶ್ವದ ಗಮನ ಸೆಳೆದಿರುವಾಗ ಇಲ್ಲಿನ ವಿದ್ಯಾರ್ಥಿಗಳು ಪದವಿ ಗಳಿಸಿ ಹೊರಬರುತ್ತಿದ್ದಾರೆ. ಕಳೆದ 6 ವರ್ಷಗಳಲ್ಲಿ ಎಂಬಿಬಿಎಸ್ ಸೀಟುಗಳು 30 ಸಾವಿರದಷ್ಟು ಹೆಚ್ಚಳವಾಗಿದೆ. ಅಂದರೆ ಶೇಕಡಾ 50ರಷ್ಟು ಅಧಿಕವಾಗಿದೆ. ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ ಕೂಡ 4 ಸಾವಿರದಷ್ಟು ಹೆಚ್ಚಳವಾಗಿದೆ. 2014ರಿಂದ ಇಲ್ಲಿಯವರೆಗೆ ಶೇಕಡಾ 80ರಷ್ಟು ಹೆಚ್ಚಾಗಿದೆ. ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರೋತ್ಸಾಹಿಸಲು ಕಳೆದ 6 ವರ್ಷಗಳಲ್ಲಿ 15 ಹೊಸ ಏಮ್ಸ್ ಗಳನ್ನು ಅನುಮೋದನೆ ಮಾಡಲಾಗಿದೆ ಎಂದರು.

ವೈದ್ಯರು ದೇಶದ ಅತ್ಯಂತ ಗೌರವಾನ್ವಿತ ಸಮುದಾಯದಲ್ಲಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರ ಮೇಲಿನ ಗೌರವ ಹೆಚ್ಚಾಗಿದೆ. ವೈದ್ಯರು ರೋಗಿಗಳಿಗೆ ಸೇವೆ ನೀಡುವಾಗ ತಮ್ಮ ಹಾಸ್ಯ ಪ್ರಜ್ಞೆಯನ್ನಿಟ್ಟುಕೊಂಡು ವೃತ್ತಿಯಲ್ಲಿ ಗಾಂಭೀರ್ಯವನ್ನು ಕಾಪಾಡಿ ನೈತಿಕತೆಯನ್ನು ಮೆರೆದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಯುವ ವೈದ್ಯ ಪದವೀಧರರಿಗೆ ಪ್ರಧಾನಿ ಕಿವಿಮಾತು ಹೇಳಿದರು.

ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಡಾ ಎಂ ಜಿ ರಾಮಚಂದ್ರನ್ ಅವರ ಹೆಸರನ್ನು ಡಾ ಎಂ ಜಿ ಆರ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಇಡಲಾಗಿದೆ. ಮೆಡಿಸಿನ್, ಡೆಂಟಿಸ್ಟ್ರಿ, ಫಾರ್ಮಸಿ, ನರ್ಸಿಂಗ್, ಆಯುಷ್, ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ವಿವಿಧ ವಿಭಾಗಗಳು ಇಲ್ಲಿವೆ.

ವಿಶ್ವವಿದ್ಯಾನಿಲಯವು 686 ಕಾಲೇಜುಗಳು ಮತ್ತು ಅಂಗಸಂಸ್ಥೆಗಳನ್ನು ತನ್ನ ವಿವಿಯಡಿ ಹೊಂದಿದೆ, ಅದು ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಪದವಿಗಳನ್ನು ನೀಡುತ್ತದೆ. ಇವುಗಳಲ್ಲಿ 41 ವೈದ್ಯಕೀಯ ಕಾಲೇಜುಗಳು, 19 ದಂತ ಕಾಲೇಜುಗಳು, 48 ಆಯುಷ್, 199 ನರ್ಸಿಂಗ್ ಕಾಲೇಜುಗಳು ಮತ್ತು ಡಾ. ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯದ ಅಡಿಯಲ್ಲಿ 81 ಫಾರ್ಮಸಿ ಕಾಲೇಜುಗಳು ಸೇರಿವೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp