Source : PTI
ಮುಂಬೈ: ದಕ್ಷಿಣ ಮುಂಬೈನ ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಮಾಡಲಿದೆ.
ಸ್ಫೋಟಕಗಳೊಂದಿಗೆ ಪತ್ತೆಯಾದ ವಾಹನವನ್ನು ಕಳೆದ ವಾರ ಕಳವು ಮಾಡಲಾಗಿತ್ತು, ಮತ್ತು ಒಳಗೆ ದೊರೆತ ಪತ್ರವೊಂದರಲ್ಲಿ ಇದು ಮುಂದಿನ ದಿನಗಳಲ್ಲಿ ನೋಡುವ ಘಟನೆಗಳ ಒಂದು ಝಲಕ್ ಮಾತ್ರವೆಂದು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಐಎ ಈ ಪ್ರಕರಣದ ಸಮಾನಾಂತರ ತನಿಖೆ ಆರಂಭಿಸಿದ್ದು ಮುಂಬೈ ಪೊಲೀಸ್ ಅಪರಾಧ ಶಾಖೆಯನ್ನು ಸಂಪರ್ಕಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಅಂಬಾನಿಯ ಬಹುಮಹಡಿ ನಿವಾಸವಾದ 'ಆಂಟಿಲಿಯಾ' ಬಳಿ ಸುಮಾರು 2.5 ಕೆಜಿ ಜೆಲೆಟಿನ್ ಕಡ್ಡಿಗಳನ್ನು ಹೊಂದಿರುವ ಸ್ಕಾರ್ಪಿಯೋ ವಾಹನವು ಗುರುವಾರ ಸಂಜೆ ಪತ್ತೆಯಾಗಿತ್ತು. ವಾಹನದೊಳಗೆ ಡಿಟೊನೇಟರ್ಗಳು ಮತ್ತು ಬ್ಯಾಟರಿಗಳೊಂದಿಗೆ ಜೋಡಿಸಲಾದ ಸ್ಫೋಟಕ ಸಾಧನಗಳಿರಲಿಲ್ಲ ಎಂದು ಪೋಲೀಸರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಎಸ್ಯುವಿಯನ್ನು ಗುರುವಾರ ಮುಂಜಾನೆ ಅಲ್ಲಿ ನಿಲ್ಲಿಸಿದ್ದಾಗಿ ತೋರಿಸಿದೆ.ಹಾಗೆ ಕಾರನ್ನು ನಿಲ್ಲಿಸಿದ ಚಾಲಕ ಇನ್ನೋವಾದಲ್ಲಿ ಹೊರಟುಹೋಗಿರುವುದು ದಾಖಲಾಗಿದೆ.