ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲಿಯಂ ಬೆಲೆ ಇಳಿಕೆ: ಧರ್ಮೇಂದ್ರ ಪ್ರಧಾನ್

ದಿನದಿಂದ ದಿನಕ್ಕೆ ಗಗನ ಮುಖಿಯಾಗಿ ಏರುತ್ತಿರುವ ತೈಲ ಬೆಲೆ ಕುರಿತಂತೆ ಶುಕ್ರವಾರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಧರ್ಮೇಂದ್ರ, ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

Published: 26th February 2021 06:15 PM  |   Last Updated: 26th February 2021 06:52 PM   |  A+A-


Dharmendra_Pradhan1

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Posted By : Nagaraja AB
Source : The New Indian Express

ವಾರಾಣಸಿ: ದಿನದಿಂದ ದಿನಕ್ಕೆ ಗಗನ ಮುಖಿಯಾಗಿ ಏರುತ್ತಿರುವ ತೈಲ ಬೆಲೆ ಕುರಿತಂತೆ ಶುಕ್ರವಾರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಧರ್ಮೇಂದ್ರ, ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ತೈಲ ಬೆಲೆ ಹೆಚ್ಚಳ  ಗ್ರಾಹಕರಂತೆ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ.  ಇದು ಅಂತಾರಾಷ್ಟ್ರೀಯ ವಿಚಾರವಾಗಿದೆ. ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆಯಾಗಿದೆ. ಇದು ಚಳಿಗಾಲದಲ್ಲಿ ಸಂಭವಿಸುತ್ತದೆ. ಈ ಋತು ಮುಗಿಯುತ್ತಿದ್ದಂತೆ ಬೆಲೆ ಕಡಿಮೆಯಾಗಲಿದೆ ಎಂದರು.

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಅರುಚಾಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಸಿಕ್ಕಿಂ ರಾಜ್ಯಗಳು ಒಳಗೊಂಡಂತೆ ಈಶಾನ್ಯ ರಾಜ್ಯಗಳ ಪ್ರದೇಶಗಳು ಏಕೆ ತೈಲ ಮತ್ತು ಅನಿಲ ವಲಯದಲ್ಲಿ ದೇಶದಲ್ಲಿ ಪ್ರಮುಖವಾಗಿವೆ ಎಂಬುದನ್ನು ವಿವರಿಸಿದರು.

ಮೊದಲ ಬಾರಿಗೆ ದೇಶದಲ್ಲಿ ದಿಗ್ಬಾಯ್ ನಲ್ಲಿ ತೈಲ ನಿಕ್ಷೇಪವನ್ನು ಕಂಡುಹಿಡಿಯಲಾಯಿತು. ದೇಶದ ಶೇಕಡ 18 ರಷ್ಟು ತೈಲ ಸಂಪನ್ಮೂಲಗಳು ಈಶಾನ್ಯ ಪೂರ್ವ ರಾಜ್ಯದಲ್ಲಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ರಾಜ್ಯಗಳು ಸಂಪೂರ್ಣ ತೈಲ ಮತ್ತು ಅನಿಲ  ಪ್ರದೇಶಗಳಾಗಿವೆ ಎಂದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp