ಚೆನ್ನೈ: ಹಿರಿಯ ಕಮ್ಯುನಿಸ್ಟ್ ನಾಯಕ ಡಿ.ಪಾಂಡಿಯಾನ್ ನಿಧನ 

ಹಿರಿಯ ಕಮ್ಯುನಿಸ್ಟ್ ನಾಯಕ, ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಡಿ ಪಾಂಡಿಯಾನ್ ಶುಕ್ರವಾರ ಬೆಳಗ್ಗೆ ಸುದೀರ್ಘ ಅನಾರೋಗ್ಯ ಬಳಿಕ ನಿಧನರಾಗಿದ್ದಾರೆ. 88 ವರ್ಷದ ಸಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ಪಾಂಡಿಯಾನ್ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಪಿ ಜವಾಹರ್ ನನ್ನು ಅಗಲಿದ್ದಾರೆ.

Published: 26th February 2021 11:54 AM  |   Last Updated: 26th February 2021 11:54 AM   |  A+A-


D Pandian

ಡಿ ಪಾಂಡಿಯಾನ್

Posted By : Sumana Upadhyaya
Source : The New Indian Express

ಚೆನ್ನೈ: ಹಿರಿಯ ಕಮ್ಯುನಿಸ್ಟ್ ನಾಯಕ, ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಡಿ ಪಾಂಡಿಯಾನ್ ಶುಕ್ರವಾರ ಬೆಳಗ್ಗೆ ಸುದೀರ್ಘ ಅನಾರೋಗ್ಯ ಬಳಿಕ ನಿಧನರಾಗಿದ್ದಾರೆ. 88 ವರ್ಷದ ಸಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ಪಾಂಡಿಯಾನ್ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಪಿ ಜವಾಹರ್ ನನ್ನು ಅಗಲಿದ್ದಾರೆ.

ಪಾಂಡಿಯನ್ ಜನಿಸಿದ್ದು 1932 ರಲ್ಲಿ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಬಳಿಯ ಕೀಝವೆಲ್ಲೈಮಲೈಪಟ್ಟಿಯಲ್ಲಿ.1948ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿಯನ್ನು ನಿಷೇಧಿಸಿದ್ದಾಗ ಪಾಂಡಿಯಾನ್ ಬಂಧನಕ್ಕೊಳಗಾಗಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಕರೈಕುಡಿಯ ಅಲಗಪ್ಪ ಕಾಲೇಜಿನಿಂದ ಪದವಿ ಮುಗಿಸಿದ ಪಾಂಡಿಯಾನ್ ನಂತರ ಅದೇ ವಿಭಾಗದಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದ್ದರು. ಅವರ ಪತ್ನಿ ಜಾಯ್ಸ್ ಅದೇ ವಿಭಾಗದಲ್ಲಿ ಶಿಕ್ಷಕಿಯಾಗಿದ್ದರು.

1962ರಲ್ಲಿ, ಅವರು ತಮ್ಮ ಬೋಧನಾ ಕೆಲಸವನ್ನು ತೊರೆದು ಪಕ್ಷದ ಸಾಹಿತ್ಯ ವಿಭಾಗವನ್ನು ಪೋಷಿಸಲು ಚೆನ್ನೈಗೆ ಸ್ಥಳಾಂತರಗೊಂಡರು. ರೈಲ್ವೆ ಮತ್ತು ಬಂದರಿನಲ್ಲಿ ಟ್ರೇಡ್ ಯೂನಿಯನ್ ಕಾರ್ಯಕಾರಿಯಾಗಿಯೂ ಸೇವೆ ಸಲ್ಲಿಸಿದರು. 1970ರ ದಶಕದ ಉತ್ತರಾರ್ಧದಲ್ಲಿ ಅವರು ಯುನೈಟೆಡ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾವನ್ನು ತೊರೆದು ಎರಡನೇ ಬಾರಿಗೆ ಸಿಪಿಐ ಅನ್ನು ಒಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1990 ರ ದಶಕದ ಉತ್ತರಾರ್ಧದಲ್ಲಿ ಅವರು ತಮ್ಮ ಪಕ್ಷವನ್ನು ಸಿಪಿಐಗೆ ವಿಲೀನಗೊಳಿಸಿದರು. 1989 ಮತ್ತು 1991 ರಲ್ಲಿ ಉತ್ತರ ಚೆನ್ನೈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp