87 ಲಕ್ಷ ಮೌಲ್ಯದ ಸೈಟ್ ಖರೀದಿಸಿ ಸುರಂಗ ಕೊರೆದು ಪಕ್ಕದ ಮನೆಯ ನೆಲದಲ್ಲಿ ಹೂತ್ತಿಟ್ಟಿದ್ದ ಅಪಾರ ಪ್ರಮಾಣದ ಬೆಳ್ಳಿ ಕದ್ದ ಖತರ್ನಾಕ್ ಖದೀಮರು!

ಭೂಗರ್ಭದಲ್ಲಿ ಹೂತಿಟ್ಟಿದ್ದ ಬೆಳ್ಳಿ ಕದಿಯಲು ಖತರ್ನಾಕ್ ಕಳ್ಳರ ಗ್ಯಾಂಗ್ 87 ಲಕ್ಷ ರೂ ಮೌಲ್ಯದ ಸೈಟ್ ಖರೀದಿಸಿ ಅಲ್ಲಿಂದಲೇ ಸುರಂಗ ಕೊರೆದು ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.

Published: 27th February 2021 05:25 PM  |   Last Updated: 27th February 2021 05:25 PM   |  A+A-


Thieves dig tunnel

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ಜೈಪುರ: ಭೂಗರ್ಭದಲ್ಲಿ ಹೂತಿಟ್ಟಿದ್ದ ಬೆಳ್ಳಿ ಕದಿಯಲು ಖತರ್ನಾಕ್ ಕಳ್ಳರ ಗ್ಯಾಂಗ್ 87 ಲಕ್ಷ ರೂ ಮೌಲ್ಯದ ಸೈಟ್ ಖರೀದಿಸಿ ಅಲ್ಲಿಂದಲೇ ಸುರಂಗ ಕೊರೆದು ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.

ಹೌದು.. ಈ ವಿಲಕ್ಷಣ ಘಟನೆ ಜೈಪುರದಲ್ಲಿ ನಡೆದಿದ್ದು, ಜೈಪುರದ ವೈದ್ಯರೊಬ್ಬರ ಮನೆಯಲ್ಲಿನ ರಹಸ್ಯ ಮಾಳಿಗೆಯಲ್ಲಿ ಅಡಗಿಸಿಟ್ಟಿದ್ದ ಬೆಳ್ಳಿಯನ್ನು ಕಳ್ಳರ ಗ್ಯಾಂಗ್ ಸುರಂಗ ತೋಡಿ ಕದ್ದು ಪರಾರಿಯಾಗಿದ್ದಾರೆ. 

ಪೊಲೀಸ್ ಮೂಲಗಳ ಪ್ರಕಾರ ಜೈಪುರದಲ್ಲಿ ಕೂದಲು ಕಸಿ ಮಾಡುತ್ತಿದ್ದ ವೈದ್ಯರೊಬ್ಬರ ಮನೆಯ ಭೂಗರ್ಭದಲ್ಲಿ ಅಪಾರ ಪ್ರಮಾಣದ ಬೆಳ್ಳಿಯನ್ನು ಅಡಗಿಸಿಡಲಾಗಿತ್ತು. ಈ ವಿಚಾರ ತಿಳಿದ ಖತರ್ನಾಕ್ ಕಳ್ಳರು ವೈದ್ಯನ ಮನೆಯ ಪಕ್ಕದಲ್ಲೇ ಸೈಟ್ ಖರೀದಿಸಿದ್ದಾರೆ. ಅದೂ ಕೂಡ ಬರೊಬ್ಬರಿ 87 ಲಕ್ಷ ರೂ ನೀಡಿ ಸೈಟ್  ಖರೀದಿಸಿದ್ದಾರೆ. ಅಲ್ಲಿಂದಲೇ ಸುರಂಗ ಕೊರೆದು ಬೆಳ್ಳಿ ಕದಿಯಲು ಸಂಚು ರೂಪಿಸಿದ್ದಾರೆ. ಇದಕ್ಕಾಗಿ ಸೈಟ್ ಸುತ್ತಲೂ ಶೆಡ್ ಗಳನ್ನು ಹಾಕಿ ತಾವು ಸುರಂಗ ಕೊರೆಯುವುದು ಯಾರಿಗೂ ತಿಳಿಯದಂತೆ ಮುಂಜಾಗ್ರತೆ ವಹಿಸಿದ್ದಾರೆ. ಬಳಿಕ ಸೈಟ್ ನಲ್ಲಿ ವೈದ್ಯನ ಮನೆಗೆ ಸುಮಾರು 20 ಅಡಿ ಉದ್ಧ ಮತ್ತು 15 ಅಡಿ ಆಳದ  ಸುರಂಗ ಕೊರೆದಿದ್ದಾರೆ. 

ಬಳಿಕ ವೈದ್ಯ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಬೆಳ್ಳಿ ಇರುವ ಪೆಟ್ಟಿಗೆಯನ್ನು ಕತ್ತರಿಸಿ ಅದರಲ್ಲಿದ್ದ ಬೆಳ್ಳಿಯನ್ನು ಕದ್ದು ಪರಾರಿಯಾಗಿದ್ದಾರೆ. ಆದರೆ ವೈದ್ಯ ಡಾ.ಸುನೀತ್ ಸೋನಿಯ ಮನೆಯಲ್ಲಿ ನೆಲ ಕೊಂಚ ಕೆಳಕ್ಕೆ ಕುಸಿದಂತೆ ಕಂಡುಬಂದಿದ್ದು, ಈ ವೇಳೆ ಅನುಮಾನಗೊಂಡ ವೈದ್ಯ ನೆಲ ಅಗೆದು ನೋಡಿದಾಗ ಬೆಳ್ಳಿ  ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವೈದ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ಕೂಡ ದಾಖಲಿಸಿದ್ದಾನೆ. ಆದರೆ ದೂರಿನಲ್ಲಿ ಎಷ್ಟು ಪ್ರಮಾಣದ ಬೆಳ್ಳಿ ಇತ್ತು ಎಂಬುದನ್ನು ಬಹಿರಂಗ ಮಾಡಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ವೈದ್ಯ ಸುನೀತ್ ಸೋನಿಯ ಸ್ನೇಹಿತನ ಪಾತ್ರದ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಬೆಳ್ಳಿ ಅಡಗಿಸಿಟ್ಟಿದ್ದ ವಿಚಾರ ಆತನ ಸ್ನೇಹಿತನಿಗೆ ಮಾತ್ರ ತಿಳಿದಿತ್ತು ಎಂದು ಹೇಳಿದ್ದಾರೆ. ಇದೀಗ ಸುನೀತ್ ಸೋನಿಯ ಸ್ನೇಹಿತನನ್ನು ಕೂಡ ಪೊಲೀಸರು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ  ಅಜಯ್‌ಪಾಲ್ ಲಂಬಾ ತಿಳಿಸಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp