ಪಂಚ ರಾಜ್ಯಗಳ ಚುನಾವಣೆ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಹೊಸ್ತಿಲಿನಲ್ಲಿ ರಾಹುಲ್ ಗಾಂಧಿಗೆ ಅಗ್ನಿ ಪರೀಕ್ಷೆ 

ಕೇರಳ, ತಮಿಳು ನಾಡು, ಪುದುಚೆರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಐದು ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಯಲ್ಲಿ ಗೆಲ್ಲುವುದು ಮಾತ್ರವಲ್ಲದೆ ನಾಯಕತ್ವ ಸಮಸ್ಯೆ, ಪಕ್ಷದೊಳಗಿನ ಒಳಜಗಳಗಳು ಸಹ ಕಾಂಗ್ರೆಸ್ ನ್ನು ಅಪಾರವಾಗಿ ಕಾಡುತ್ತಿದೆ.

Published: 27th February 2021 08:19 AM  |   Last Updated: 27th February 2021 08:19 AM   |  A+A-


Rahul Gandhi

ರಾಹುಲ್ ಗಾಂಧಿ

Posted By : Sumana Upadhyaya
Source : The New Indian Express

ನವದೆಹಲಿ: ಕೇರಳ, ತಮಿಳು ನಾಡು, ಪುದುಚೆರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಐದು ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಯಲ್ಲಿ ಗೆಲ್ಲುವುದು ಮಾತ್ರವಲ್ಲದೆ ನಾಯಕತ್ವ ಸಮಸ್ಯೆ, ಪಕ್ಷದೊಳಗಿನ ಒಳಜಗಳಗಳು ಸಹ ಕಾಂಗ್ರೆಸ್ ನ್ನು ಅಪಾರವಾಗಿ ಕಾಡುತ್ತಿದೆ.

ಕೇರಳ ಮತ್ತು ಅಸ್ಸಾಂನಲ್ಲಿ ಸರ್ಕಾರ ರಚಿಸುವ ಉತ್ಸುಕದಲ್ಲಿ ಕಾಂಗ್ರೆಸ್ ಇದ್ದರೆ ಪಶ್ಚಿಮ ಬಂಗಾಳ ಮತ್ತು ತಮಿಳು ನಾಡಿನಲ್ಲಿ ಸೀಟುಗಳನ್ನು ಹೆಚ್ಚು ಗಳಿಸುವ ಉದ್ದೇಶವನ್ನು ಹೊಂದಿದೆ.

ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಗಳನ್ನು ಕಾಂಗ್ರೆಸ್ ಎದುರಿಸಿದರೆ ಅದು ನಾಯಕತ್ವ ಮೇಲೆ ಪರಿಣಾಮ ಬೀರಲಿದೆ. ಈ ಚುನಾವಣೆ ನಂತರ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಕೇರಳ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದ್ದರೆ, ತಮಿಳು ನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ ಡಿಎಂಕೆ ಮತ್ತು ಎಡರಂಗ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುವ ಪಕ್ಷವಾಗಿದೆ.

ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದಕ್ಕೆ ಈ ಪಂಚ ರಾಜ್ಯಗಳ ಚುನಾವಣೆ ಕನ್ನಡಿಯಂತಿದೆ. ಕಳೆದ ವರ್ಷ ಪಕ್ಷದ ಕೆಲವು ಹಿರಿಯ ನಾಯಕರು ನಾಯಕತ್ವ ಬಗ್ಗೆ ಪ್ರಶ್ನಿಸಿ ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಕಾಂಗ್ರೆಸ್ ನಲ್ಲಿ ಪರ್ಯಾಯ ನಾಯಕತ್ವ ಹುಡುಕಬೇಕು ಎಂಬರ್ಥದಲ್ಲಿ ಬರೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ಅವರ ತಂಡ ಉತ್ತಮ ಸಾಧನೆ ತೋರಿದರೆ ಅವರ ನಾಯಕತ್ವವನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ.

ಕೇರಳದಲ್ಲಿ ಸಾಮಾನ್ಯವಾಗಿ ಇದುವರೆಗೆ ಬದಲಿ ಪಕ್ಷಗಳನ್ನು ಅಧಿಕಾರಕ್ಕೆ ಜನ ತೆಗೆದುಕೊಂಡು ಬರುತ್ತಿದ್ದರು. ರಾಹುಲ್ ಗಾಂಧಿಯವರು ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವುದರಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಗೆಲ್ಲಬೇಕೆಂಬ ಅಪಾರ ಆಕಾಂಕ್ಷೆಯಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರ್ಗಮಿತ ಎಲ್ ಡಿಎಫ್ ಸರ್ಕಾರದ ಕಳಪೆ ಸಾಧನೆಯ ನಂತರ ರಾಹುಲ್ ಗಾಂಧಿ ರಾಜ್ಯದಲ್ಲಿ ಸತತವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಅಸ್ಸಾಂನಲ್ಲಿ ತರುಣ್ ಗೊಗೊಯ್ ಅವರ ನಿಧನ ನಂತರ ಪಕ್ಷ ಜನಪ್ರಿಯತೆ ಕಳೆದುಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಇರುವ ಅಸ್ತ್ರವೊಂದೇ ಅದು ಸಿಎಎ, ಎನ್ ಆರ್ ಸಿ ವಿಚಾರದಲ್ಲಿ ಜನರ ಭಾವನೆಗಳನ್ನು ಕೆರಳಿಸುವುದು. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ತನ್ನ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ತೋರಿಸುತ್ತಿದೆ.

ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಪರಸ್ಪರ ಜಿದ್ದಾಜಿದ್ದಿಯಲ್ಲಿ ತೊಡಗಿವೆ. ಇಲ್ಲಿ ಕಾಂಗ್ರೆಸ್-ಎಡ ಮೈತ್ರಿ ಇದನ್ನು ಭಾರತೀಯ ಸೆಕ್ಯುಲರ್ ಫ್ರಂಟ್ ಆಫ್ ಫರ್ಫುರಾ ಷರೀಫ್ ಪಾದ್ರಿ ಅಬ್ಬಾಸ್ ಸಿದ್ದಿಕಿ ಅವರೊಂದಿಗೆ ತ್ರಿಕೋನ ಸ್ಪರ್ಧೆಯಾಗಿ ಪರಿವರ್ತಿಸಲು ನೋಡುತ್ತಿದೆ. ಅಲ್ಪಸಂಖ್ಯಾತ ಮತಗಳನ್ನು ಅದರ ಪರವಾಗಿ ಕ್ರೋಢೀಕರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp