
ವಡೋದರ: ಕಟ್ಟಡ ನಿರ್ಮಾಣ ಪ್ರದೇಶದಲ್ಲಿ 11 ಅಡಿಯ ಮೊಸಳೆ ಪತ್ತೆ!
ನವದೆಹಲಿ: ಕಟ್ಟಡ ನಿರ್ಮಾಣ ಪ್ರದೇಶದಲ್ಲಿ 11 ಅಡಿಯ ಬೃಹದಾಕಾರದ ಮೊಸಳೆ ಪತ್ತೆಯಾಗಿದೆ. ಗುಜರಾತ್ ನ ವಡೋದರಾದಲ್ಲಿ ಈ ಘಟನೆ ವರದಿಯಾಗಿದ್ದು ವಿಡಿಯೋ ವೈರಲ್ ಆಗತೊಡಗಿದೆ.
ವನ್ಯಜೀವಿ ರಕ್ಷಣಾ ಟ್ರಸ್ಟ್ ನ ಅಧ್ಯಕ್ಷ ಅರವಿಂದ್ ಪವಾರ್ ನೀಡಿರುವ ಮಾಹಿತಿಯ ಪ್ರಕಾರ ಮೊಸಳೆ 10-11 ಅಡಿಯಷ್ಟು ಉದ್ದವಿದ್ದು, ಕೇಲನ್ ಪುರ್ ಪ್ರದೇಶದ ಚರಂಡಿಯಲ್ಲಿ ಕಾಣಿಸಿಕೊಂಡಿದೆ.
Gujarat: An 11-feet long crocodile was rescued from a construction site in Kelanpur area, Vadodara.
— ANI (@ANI) February 27, 2021
"We rescued the crocodile and have handed it over to the forest department," said President of Wildlife Rescue Trust (27.02) pic.twitter.com/0V3JOIuVxx
ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಬಿಲ್ಡರ್ ನಮಗೆ ಕರೆ ಮಾಡಿ ಮೊಸಳೆ ಪತ್ತೆಯಾಗಿರುವುದರ ಬಗ್ಗೆ ಮಾಹಿತಿ ನೀಡಿದರು. ಮೊಸಳೆಯನ್ನು ರಕ್ಷಣೆ ಮಾಡಲಾಗಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದೇವೆ ಎಂದು ಪವಾರ್ ಹೇಳಿದ್ದಾರೆ.