ಶ್ರೀಹರಿಕೋಟಾ: ಬ್ರೆಜಿಲ್ ನ ಮೊದಲ ಉಪಗ್ರಹ ಯಶಸ್ವಿಯಾಗಿ ಉಡಾಯಿಸಿದ ಇಸ್ರೊ
ಅಮೆಜೋನಿಯಾ-1 ಮತ್ತು ಇತರ 18 ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51ನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಭಾನುವಾರ ಯಶಸ್ವಿಯಾಗಿ ಉಡಾಯಿಸಿದೆ.
Published: 28th February 2021 11:21 AM | Last Updated: 28th February 2021 01:22 PM | A+A A-

ಉಪಗ್ರಹ ಉಡಾವಣೆ
ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಅಮೆಜೋನಿಯಾ-1 ಮತ್ತು ಇತರ 18 ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51ನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಭಾನುವಾರ ಯಶಸ್ವಿಯಾಗಿ ಉಡಾಯಿಸಿದೆ.
ಬ್ರೆಜಿಲ್ ವಿನ್ಯಾಸಗೊಳಿಸಿ ಸಂಯೋಜಿಸಿರುವ ಮೊಟ್ಟಮೊದಲ ಉಪಗ್ರಹ ಅಮೆಜೋನಿಯಾ-1 ಆಗಿದೆ. ಇದನ್ನು ಯಶಸ್ವಿಯಾಗಿ ಉಡಾಯಿಸಿರುವುದು ತೀವ್ರ ಸಂತಸ ಉಂಟುಮಾಡುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು ಇದಕ್ಕಾಗಿ ನಾನು ಬ್ರೆಜಿಲ್ ನ ವಿಜ್ಞಾನಿಗಳ ತಂಡವನ್ನು ಅಭಿನಂದಿಸುತ್ತೇನೆ ಎಂದು ಇಸ್ರೊ ಮುಖ್ಯಸ್ಥ ಕೆ ಶಿವನ್ ಹೇಳಿದ್ದಾರೆ.
ಅಮೆಜೋನಿಯಾ1 ಯಶಸ್ವಿಯಾಗಿ ಪಿಎಸ್ ಎಲ್ ವಿಸಿ51ನಿಂದ ನಾಲ್ಕನೇ ಹಂತದಲ್ಲಿ ಬೇರ್ಪಟ್ಟು ಕಕ್ಷೆಗೆ ಸೇರ್ಪಡೆಯಾಗಿದೆ. ಸಹ ಪ್ರಯಾಣದ ಉಪಗ್ರಹಗಳು ಕೂಡ ವಾಹಕದಿಂದ ಬೇರ್ಪಟ್ಟು ಕಕ್ಷೆಗೆ ಸೇರ್ಪಡೆಯಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಬ್ರೆಜಿಲ್ ನ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೊ ಸಂಸ್ಥೆಯ ಪಿಎಸ್ ಎಲ್ ವಿ-ಸಿ51 ವಾಹಕ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕೆ ಅಲ್ಲಿನ ಅಧ್ಯಕ್ಷ ಜೈರ್ ಬೊನ್ಸೊನರೊಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಂತರಿಕ್ಷ ಸಹಕಾರದಲ್ಲಿ ಇದೊಂದು ಐತಿಹಾಸಿಕ ಗಳಿಗೆಯಾಗಿದ್ದು ಬ್ರೆಜಿಲ್ ನ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.
Primary satellite #Amazonia1 successfully separated from #PSLVC51. Join us again at 1210 hrs IST for witnessing the separation of co-passenger satellites
— ISRO (@isro) February 28, 2021
ISRO Website : https://t.co/bwLKodEjCL
Youtube: https://t.co/XlVvZaENl5
Facebook: https://t.co/MYy1DZUA7e