ಬಿಜೆಪಿ ಆಡಳಿತದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ 'ಅಸಮಾನತೆ' ಪ್ರಬಲವಾಗಿದೆ: ರಾಹುಲ್ ಗಾಂಧಿ 

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಂಪತ್ತು ವಿತರಣೆಯಲ್ಲಿ ಅಸಮಾನತೆ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Published: 28th February 2021 03:30 PM  |   Last Updated: 28th February 2021 03:30 PM   |  A+A-


Rahul Gandhi met Salt Pan workers at Beach Road near Roche Park.

ತಮಿಳು ನಾಡಿನ ರೋಚೆ ಪಾರ್ಕ್ ಬಳಿಯ ಬೀಚ್ ರಸ್ತೆ ಬಳಿ ಉಪ್ಪು ತಯಾರಿಸುವ ಕಾರ್ಮಿಕರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

Posted By : Sumana Upadhyaya
Source : The New Indian Express

ಟ್ಯುಟಿಕೋರಿನ್: ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಂಪತ್ತು ವಿತರಣೆಯಲ್ಲಿ ಅಸಮಾನತೆ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ತಮಿಳು ನಾಡಿನಲ್ಲಿ ಚುನಾವಣಾ ರ್ಯಾಲಿ ಪ್ರವಾಸದ ಎರಡನೇ ದಿನವಾದ ಇಂದು ಮಾತನಾಡಿದ ಅವರು, ಉಪ್ಪು ತಯಾರಿಸುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ನಾಯಕನಲ್ಲಿ ವಿಷಯ ಹಂಚಿಕೊಂಡರು.

ಸರ್ಕಾರದಿಂದ ವರ್ಷದಲ್ಲಿ ನಾಲ್ಕು ತಿಂಗಳು ತಮಗೆ ಆರ್ಥಿಕ ನೆರವು ಬೇಕು, ಈ ಸಮಯದಲ್ಲಿ ತಮಗೆ ಕೆಲಸವಿರುವುದಿಲ್ಲ ಎಂದು ಓರ್ವ ಮಹಿಳೆ ಕೇಳಿದಾಗ ಯುಪಿಎ ಸರ್ಕಾರದ ಅವಧಿಯಲ್ಲಿ ಇಂತಹ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದೆವು, ಯುಪಿಎ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಸಂಪತ್ತಿನ ಹಂಚಿಕೆ ಸಮಾನವಾಗಿ ಆಗುತ್ತಿಲ್ಲ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ, ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದಾರೆ ಎಂದು ಕಂಡುಬಂದಿತ್ತು ಎಂದರು.

ಕನಿಷ್ಠ ಆದಾಯ ಹೊಂದಲು ನ್ಯಾಯ ಯೋಜನೆ ಜಾರಿಗೆ ತಂದರೆ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಮೂಲಕ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಬಹುದು ಎಂದು ರಾಹುಲ್ ಗಾಂಧಿ ಹೇಳಿದರು. ಯಾವ ರಾಜ್ಯದಿಂದ ಬಂದವರಾಗಿರಲಿ, ಯಾವ ಭಾಷೆ, ಯಾವ ಧರ್ಮ ಎಂದು ನೋಡದೆ ಬಡವರಿಗೆ ಅವರ ಬ್ಯಾಂಕ್ ಖಾತೆಗಳಿಗೆ ವರ್ಷದಲ್ಲಿ 72 ಸಾವಿರ ರೂಪಾಯಿ ನೀಡುವ ಯೋಜನೆಯಿಂದ ಅನೇಕರನ್ನು ಬಡತನದಿಂದ ಹೊರಗೆ ತರಬಹುದು ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲಸವಿಲ್ಲದೆ ಇರುವ ಸಮಯದಲ್ಲಿ ಬಡವರಿಗೆ ಜೀವನ ನಡೆಸಲು ನ್ಯಾಯ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ತಾವು ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಹಣವನ್ನು ಪುರುಷರು ಮದ್ಯ ಸೇವನೆ ಮಾಡಿ ಹಾಳು ಮಾಡುತ್ತಾರೆ. ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿ ಎಂದು ಅಲ್ಲಿ ಸೇರಿದ್ದ ಮಹಿಳಾ ಕಾರ್ಮಿಕರು ರಾಹುಲ್ ಗಾಂಧಿಗೆ ಒತ್ತಾಯಿಸಿದರು. 
ಕೆಲವರು ಉಪ್ಪು ತಯಾರಿಸುವ ಪ್ರದೇಶದಲ್ಲಿರುವ ಕೇಂದ್ರ ಸರ್ಕಾರದ ಉಪ್ಪು ಇಲಾಖೆಯ ಒಡೆತನದ ಬಳಸದೇ ಇರುವ ಖಾಲಿ ಸೈಟುಗಳಲ್ಲಿ ಕಾರ್ಮಿಕರಿಗೆ ಮನೆ ನಿರ್ಮಿಸಲು ಸಹಾಯ ಮಾಡಿಕೊಡಿ ಎಂದು ಕೋರಿದರು. ಉತ್ತಮ ವೇತನ, ಅಭಿವೃದ್ಧಿ ನಿಗಮ, ಪಿಂಚಣಿ ಮತ್ತು ಜೀವನ ಮಟ್ಟ ಸುಧಾರಣೆ ಕಾರ್ಮಿಕರು ಕೇಳಿದ ಇನ್ನಿತರ ಬೇಡಿಕೆಯಾಗಿದೆ.

ಬಹಳ ವರ್ಷಗಳಿಂದ ಉಪ್ಪು ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಯಾವ ಆರೋಗ್ಯ ಸಮಸ್ಯೆ ಬರುತ್ತಿದೆ ಎಂದು ಕೇಳಿದಾಗ ಕಣ್ಣಿಗೆ ಸಂಬಂಧಪಟ್ಟ ಮತ್ತು ನಡೆಯಲು ಸಾಧ್ಯವಾಗದೆ ಕಾಲಿನಲ್ಲಿ ಗಾಯವಾಗುವ ಸಮಸ್ಯೆ ಕೂಡ ಉಂಟಾಗುತ್ತದೆ ಎಂದು ಕಾರ್ಮಿಕರು ತಮ್ಮ ಸಂಕಷ್ಟ ತೋಡಿಕೊಂಡರು.


Stay up to date on all the latest ರಾಷ್ಟ್ರೀಯ news
Poll
Minister sudhakar

ಆಧುನಿಕ ಭಾರತೀಯ ಮಹಿಳೆ ಮದುವೆ, ಮಕ್ಕಳನ್ನು ಬಯಸುವುದಿಲ್ಲ: ಸಚಿವ ಸುಧಾಕರ್ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp