ಮೋದಿಯನ್ನು ನಾಗ್ಪುರಕ್ಕೆ ಕಳುಹಿಸುತ್ತೇವೆ- ರಾಹುಲ್ ಗಾಂಧಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಂಪೂರ್ಣ ಆಟ ಕಳ್ಳತನದ್ದೇ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ.

Published: 28th February 2021 11:44 PM  |   Last Updated: 28th February 2021 11:47 PM   |  A+A-


Rahul_Gandhi1

ರಾಹುಲ್ ಗಾಂಧಿ

Posted By : Nagaraja AB
Source : UNI

ಚನ್ನೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಂಪೂರ್ಣ ಆಟ ಕಳ್ಳತನದ್ದೇ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ.

ತಮಿಳುನಾಡಿನ ತಿರುನೆಲ್ವೇಲಿಯ ಸೈಂಟ್  ಕ್ಸೇವಿಯರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಇಂದು ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಮೋದಿಗಿಂತ ಅತೀದೊಡ್ಡ ಶತ್ರುವನ್ನು ನಾವು ಸೋಲಿಸಿದ್ದೇವೆ. ಯಾರನ್ನು ಬೇಕಾದರೂ ಪ್ರೀತಿ ಮತ್ತು ಅಹಿಂಸೆಯ ಮಾರ್ಗದಲ್ಲಿ ಸೋಲಿಸಬಹುದು ಎಂದು ಅವರು ಹೇಳಿದರು

ನಾವು ಅಸಾಧಾರಣ ಶತ್ರುವಿನೊಂದಿಗೆ ಸೆಣಸಾಡುತ್ತಿದ್ದೇವೆ. ಹಣದ ಪ್ರಾಬಲ್ಯ ಹೊಂದಿರುವ ಶತ್ರುಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ವಿರೋಧ ಪಕ್ಷಗಳನ್ನು ಪುಡಿಗಟ್ಟಿಕೊಂಡು ಸಾಗುವ ಶತ್ರುಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇದಕ್ಕೂ ಮೊದಲು ನಾವು ಇದನ್ನು ಮಾಡಿ ತೋರಿಸಿದ್ದೆವು. ಈಗಿರುವ ಶತ್ರುವಿಗಿಂತ ದೊಡ್ಡ ಶತ್ರು (ಬ್ರಿಟಿಷರು)ಗಳನ್ನು ನಾವು ಸೋಲಿಸಿದ್ದೇವೆ ಎಂದು ಹೇಳಿದರು

ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಯಾರು? ಯಾರೂ ಅಲ್ಲ. ಈ ದೇಶದ ಜನರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂದಕ್ಕೆ ಕಳುಹಿಸಿದರು ಮತ್ತು ಅದೇ ರೀತಿಯಲ್ಲಿ ನಾವು ನರೇಂದ್ರ ಮೋದಿಯವರನ್ನು ಮತ್ತೆ ನಾಗ್ಪುರಕ್ಕೆ ಕಳುಹಿಸುತ್ತೇವೆ ಎಂದು ಅವರು ಗುಡುಗಿದರು. 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp