'ಅಚ್ಛೇ ದಿನ'ದ ಕನಸು ತೋರಿಸಿದ ಮೋದಿ ಸರ್ಕಾರದಿಂದ ಸಿಕ್ಕಿದ್ದು, ನೋವು, ನರಳಾಟ ಮಾತ್ರ: ಕಾಂಗ್ರೆಸ್
ದೇಶದ ಜನರಿಗೆ ಅಚ್ಛೇ ದಿನದ ಕನಸು ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ 2020ರ ವರ್ಷದಲ್ಲಿ ಜನರಿಗೆ ಸಿಕ್ಕಿದ್ದು, ನೋವು, ನರಳಾಟ ಮಾತ್ರ ಎಂದು ಕಾಂಗ್ರೆಸ್ ಟೀಕಿಸಿದೆ.
Published: 01st January 2021 01:33 PM | Last Updated: 01st January 2021 03:06 PM | A+A A-

ಪ್ರಧಾನಿ ಮೋದಿ, ವಲಸೆ ಕಾರ್ಮಿಕರ ಚಿತ್ರ
ಬೆಂಗಳೂರು: ದೇಶದ ಜನರಿಗೆ ಅಚ್ಛೇ ದಿನದ ಕನಸು ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ 2020ರ ವರ್ಷದಲ್ಲಿ ಜನರಿಗೆ ಸಿಕ್ಕಿದ್ದು, ನೋವು, ನರಳಾಟ ಮಾತ್ರ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ವಿಡಿಯೋ ಟ್ವಿಟ್ ಮಾಡಿರುವ ಕೆಪಿಸಿಸಿ, ನಿರುದ್ಯೋಗ, ಆರ್ಥಿಕ ಕುಸಿತ, ಸರ್ವಾಧಿಕಾರಿ ನೀತಿಗಳು, ಜನ ವಿರೋಧಿ ಕಾಯ್ದೆಗಳಿಂದ ದೇಶದ ಅಭಿವೃದ್ಧಿ ಪಥವನ್ನು ದಿಕ್ಕು ತಪ್ಪಿಸಿದ್ದೇ ಅವರ ಸಾಧನೆ ಎಂದಿದೆ.
ದೇಶದ ಜನರಿಗೆ 'ಅಚ್ಛೇ ದಿನ'ದ ಕನಸು ತೋರಿಸಿದ @narendramodi ಸರ್ಕಾರದಿಂದ 2020ರ ವರ್ಷದಲ್ಲಿ ಜನರಿಗೆ ಸಿಕ್ಕಿದ್ದು, ನೋವು, ನರಳಾಟ ಮಾತ್ರ.
— Karnataka Congress (@INCKarnataka) January 1, 2021
ನಿರುದ್ಯೋಗ, ಆರ್ಥಿಕ ಕುಸಿತ, ಸರ್ವಾಧಿಕಾರಿ ನೀತಿಗಳು, ಜನ ವಿರೋಧಿ ಕಾಯ್ದೆಗಳಿಂದ ದೇಶದ ಅಭಿವೃದ್ಧಿ ಪಥವನ್ನು ದಿಕ್ಕು ತಪ್ಪಿಸಿದ್ದೇ ಅವರ ಸಾಧನೆ.#LookingBackAt2020 pic.twitter.com/xA92si57Y9
ನಾನೇ ಸಿಎಂ.ನಾನೇ ಸಿಎಂ.ನಾನೇ ಸಿಎಂ! ಹೀಗೆ ಪದೇ ಪದೆ ಒತ್ತಿ ಹೇಳುತ್ತಿದ್ದಾರೆಂದರೆ ಯಡಿಯೂರಪ್ಪ ಅವರ ಕುರ್ಚಿಯನ್ನು ಬಿಜೆಪಿಯವರು ಎಳೆಯುತ್ತಿದ್ದಾರೆ ಎಂದರ್ಥ.
ಇತ್ತ ಶಾಸಕರಿಗೆ ಸ್ವಾತಂತ್ರವಿಲ್ಲ ಎಂದು ಬಸನಗೌಡ ಪಾಟೀಲ್ ಯಾತ್ನಾಳ್ ಕಿಡಿಕಾರುತ್ತಿದ್ದಾರೆ. ಗಂಡ ಹಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ರಾಜ್ಯ ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ ಎಂದು ಟೀಕಿಸಲಾಗಿದೆ.
ನಾನೇ ಸಿಎಂ.ನಾನೇ ಸಿಎಂ.ನಾನೇ ಸಿಎಂ!
— Karnataka Congress (@INCKarnataka) January 1, 2021
ಹೀಗೆ ಪದೇ ಪದೆ ಒತ್ತಿ ಹೇಳುತ್ತಿದ್ದಾರೆಂದರೆ @BSYBJP ಅವರ ಕುರ್ಚಿ ಎಳೆಯುತ್ತಿದ್ದಾರೆ ಎಂದರ್ಥ.
ಇತ್ತ @BasanagoudaBJP
ಶಾಸಕರಿಗೆ ಸ್ವತಂತ್ರವಿಲ್ಲ ಎಂದು ಕಿಡಿಕಾರುತ್ತಿದ್ದಾರೆ.
ಗಂಡಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ@BJP4Karnatakaಯ ಆಂತರಿಕ ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ. pic.twitter.com/uwFO1x2pPh