ಗುಜರಾತ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಟಿಪಿ ಜೊತೆ ಎಂಐಎಂ ದೋಸ್ತಿ!

ಹೈದರಾಬಾದ್ ನಿಂದ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವುದಕ್ಕೆ ಎಂಐಎಂ ಪಕ್ಷ ಈಗ ಗುಜರಾತ್ ಮೇಲೆ ಕಣ್ಣಿಟ್ಟಿದೆ. 

Published: 02nd January 2021 11:43 PM  |   Last Updated: 02nd January 2021 11:46 PM   |  A+A-


Bhartiya Tribal Party president Maheshbhai C Vasava (Photo | Maheshbhai C Vasava Facebook)

ಬಿಟಿಪಿ ಅಧ್ಯಕ್ಷ ಮಹೇಶ್ ಭಾಯ್ ವಸವ

Posted By : Srinivas Rao BV
Source : The New Indian Express

ಬಹ್ರೂಚ್: ಹೈದರಾಬಾದ್ ನಿಂದ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವುದಕ್ಕೆ ಎಂಐಎಂ ಪಕ್ಷ ಈಗ ಗುಜರಾತ್ ಮೇಲೆ ಕಣ್ಣಿಟ್ಟಿದೆ. 

ಗುಜರಾತ್ ನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಐಎಂ ಪಕ್ಷ ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಬಿಟಿಪಿ ನಾಯಕ ಛೊಟು ವಸವಾ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. 

ಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಬಹ್ರೂಚ್ ಜಿಲ್ಲೆಯಲ್ಲಿರುವಬ್ ಬಿಟಿಪಿ ನಾಯಕರ ನಿವಾಸದಲ್ಲಿ ಸಭೆ ನಡೆಸಿದ್ದರು. ಡಿಸೆಂಬರ್ ನಲ್ಲಿ ವಸವ ಅವರು, ಎರಡು ಜಿಲ್ಲಾ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ತೊರೆಯುವುದಕ್ಕೆ ನಿರ್ಧರಿಸಿದ್ದರು.

"ಅಸಾದುದ್ದೀನ್ ಒವೈಸಿ ಭಾರತೀಯ ಸಂವಿಧಾನಕ್ಕಾಗಿ ಹೋರಾಡುತ್ತಿರುವ ಜನರೊಟ್ಟಿಗೆ ಇದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರಿಗಾಗಿ ಏನನ್ನೂ ಮಾಡುತ್ತಿಲ್ಲ. ನಮ್ಮ ಹಕ್ಕುಗಳನ್ನು ಕಸಿಯುತ್ತಿರುವ ಈ ಸರ್ಕಾರದ ವಿರುದ್ಧ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ, ಗುಜರಾತ್ ನಲ್ಲಿ ಎಂಐಎಂ ಜೊತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲಿದ್ದೇವೆ" ಎಂದು ವಸವ ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp