ಕೃಷಿ ಕಾನೂನು: ದೆಹಲಿಯ ಪ್ರತಿಭಟನಾ ನಿರತ ಸ್ಥಳಕ್ಕೆ ಉತ್ತರಾಖಂಡ್ ರೈತರಿಂದ ಉಚಿತ ಬಸ್ ಸೇವೆ 

ಕೃಷಿ ಕಾನೂನನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಗಳಿಗೆ ತೆರಳಲು ಹಾಗೂ ಅಲ್ಲಿಂದ ವಾಪಸ್ಸಾಗಲು ಉತ್ತರಾಖಂಡ್ ನ ಉಧಮ್ ಸಿಂಗ್ ನಗರದ ರೈತರು ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ. 

Published: 03rd January 2021 11:55 PM  |   Last Updated: 04th January 2021 12:06 AM   |  A+A-


Agri Laws: Uttarakhand farmers start free bus service to Delhi protest site

ಕೃಷಿ ಕಾನೂನು: ದೆಹಲಿಯ ಪ್ರತಿಭಟನಾ ನಿರತ ಸ್ಥಳಕ್ಕೆ ಉತ್ತರಾಖಂಡ್ ರೈತರಿಂದ ಉಚಿತ ಬಸ್ ಸೇವೆ

Posted By : Srinivas Rao BV
Source : The New Indian Express

ಡೆಹ್ರಾಡೂನ್: ಕೃಷಿ ಕಾನೂನನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಗಳಿಗೆ ತೆರಳಲು ಹಾಗೂ ಅಲ್ಲಿಂದ ವಾಪಸ್ಸಾಗಲು ಉತ್ತರಾಖಂಡ್ ನ ಉಧಮ್ ಸಿಂಗ್ ನಗರದ ರೈತರು ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ. 

ಶನಿವಾರದಂದು ಪ್ರಾರಂಭವಾದ ಈ ಬಸ್ ಸೇವೆ, ವಾರದಲ್ಲಿ ಎರಡು ದಿನ ಸೋಮವಾರ-ಗುರುವಾರಗಳಂದು ಲಭ್ಯವಿರಲಿದೆ.

ಇದಕ್ಕೆ ತಗುಲುವ ವೆಚ್ಚಗಳನ್ನು ಸ್ಥಳೀಯ ಗುರುದ್ವಾರ ಸಮಿತಿಗಳು ಭರಿಸಲಿದ್ದು, ಶೀಘ್ರವೇ 3-4 ದಿನಗಳಿಗೆ ವಿಸ್ತರಿಸುವ ಯೋಜನೆಯನ್ನೂ ಹೊಂದಲಾಗಿದೆ.

ದೇಶದ ರೈತರ ಜೊತೆ ನಾವು ನಿಲ್ಲುತ್ತೇವೆ,ರೈತ ವಿರೋಧಿ ಕೃಷಿ ಕಾನೂನನ್ನು ಹಿಂಪಡೆಯುವುದಕ್ಕೆ ಅಗತ್ಯವಿರುವ ಎಲ್ಲವನ್ನೂ ನಾವು ಮಾಡಲಿದ್ದೇವೆ ಎಂದು ಉಧಮ್ ಸಿಂಗ್ ನಗರ್ ಜಿಲ್ಲೆಯ ಬಾಜ್ ಪುರದ ರೈತ ಅಜಿತ್ ಸಿಂಗ್ ರಾಂಧ್ವಾ ಹೇಳಿದ್ದಾರೆ. 

ದೆಹಲಿಯಲ್ಲಿರುವ ಪ್ರತಿಭಟನಾ ನಿರತ ರೈತರ ಜೊತೆಗೆ ಈ ನಗರದಿಂದ 20,000 ರೈತರು ಸಾಥ್ ನೀಡಿ ಪ್ರತಿಭಟನಾ ಸ್ಥಳದಲ್ಲಿದ್ದಾರೆ.

ಉತ್ತರಾಖಂಡ್ ನ ರುದ್ರಪುರ್, ಗದಾರ್ ಪುರ್, ಖತಿಮಾ, ಕಿಚ್ಚಾ, ಕಾಶಿಪುರ್, ಸಿತಾರ್ ಗಂಜ್ ತೆಹ್ಸ್ಲಿಸ್ ಗಳಿಂದಲೂ ಪ್ರತಿಭಟನಾ ಸ್ಥಳಕ್ಕೆ ಬಸ್ ಸೇವೆಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ. 

ಬಾಜ್ ಪುರದಿಂದ ಘಾಜಿಪುರದ ಗಡಿಗೆ ಒಮ್ಮೆ ತೆರಳುವುದಕ್ಕೆ 12000-15000 ರೂಪಾಯಿ ಖರ್ಚಾಗಲಿದ್ದು, ಪ್ರತಿಭಟನಾ ಸ್ಥಳಕ್ಕೆ ತೆರಳುವ ರೈತರ ವೆಚ್ಚಗಳನ್ನು ಸ್ಥಳೀಯ ಸಮಿತಿಗಳು ಭರಿಸಲಿವೆ. ಕಳೆದ ತಿಂಗಳು ಉಧಾಮ್ ಸಿಂಗ್ ನಗರ ಜಿಲ್ಲಾ ಪೊಲೀಸರು ಹಾಕಿದ್ದ ಬ್ಯಾರಿಕೆಡ್ ಗಳನ್ನು ಮುರಿದು ದೆಹಲಿಯೆಡೆಗೆ ತೆರಳಿದ್ದ 1000 ಕ್ಕೂ ಹೆಚ್ಚು ರೈತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp