ಹರ್ಯಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ: ತಂಗಿಯನ್ನು ಮದುವೆಯಾದ ಅನ್ಯಜಾತಿ ಯುವಕನನ್ನು ಕೊಲೆ ಮಾಡಿದ ಅಣ್ಣಂದಿರು

ಕಳೆದ ಮೂರು ದಿನಗಳಲ್ಲಿ ಹರ್ಯಾಣ ರಾಜ್ಯದಲ್ಲಿ ಮರ್ಯಾದಾ ಹತ್ಯೆಯ ಮತ್ತೊಂದು ಪ್ರಕರಣ ವರದಿಯಾಗಿದ್ದು, ತಮ್ಮ ಸೋದರಿಯನ್ನು ಮದುವೆಯಾದ ಅನ್ಯ ಜಾತಿಯ 23 ಯುವಕನನ್ನು ಸೋದರರು ಹತ್ಯೆ ಮಾಡಿರುವ ಘಟನೆ ನಡೆದಿದೆ.

Published: 03rd January 2021 10:02 AM  |   Last Updated: 03rd January 2021 10:27 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ಚಂಡೀಗಢ/ನವದೆಹಲಿ: ಕಳೆದ ಮೂರು ದಿನಗಳಲ್ಲಿ ಹರ್ಯಾಣ ರಾಜ್ಯದಲ್ಲಿ ಮರ್ಯಾದಾ ಹತ್ಯೆಯ ಮತ್ತೊಂದು ಪ್ರಕರಣ ವರದಿಯಾಗಿದ್ದು, ತಮ್ಮ ಸೋದರಿಯನ್ನು ಮದುವೆಯಾದ ಅನ್ಯ ಜಾತಿಯ 23 ಯುವಕನನ್ನು ಸೋದರರು ಹತ್ಯೆ ಮಾಡಿರುವ ಘಟನೆ ನಡೆದಿದೆ.

23 ವರ್ಷದ ನೀರಜ್ ಎಂಬಾತನನ್ನು ಮದುವೆಯಾದ ಹುಡುಗಿಯ ಸೋದರರು ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಕಳೆದ ಶುಕ್ರವಾರ ರಾತ್ರಿ ಪಾಣಿಪತ್ ನ ಜನದಟ್ಟಣೆಯ ಪ್ರದೇಶದಲ್ಲಿ ನಡೆದಿದ್ದು, ಕೊಲೆ ಮಾಡಿ ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಪೊಲೀಸರು ಈ ಸಂಬಂಧ ಕೇಸು ದಾಖಲಿಸಿದ್ದು, ನೀರಜ್ ನನ್ನು ಕೊಲೆ ಮಾಡಿದವರನ್ನು ಇನ್ನೂ ಬಂಧಿಸಿಲ್ಲ.

ನೀರಜ್ ನ ಹಿರಿಯ ಸೋದರ ಜಗದೀಶ್ ಹೇಳುವ ಪ್ರಕಾರ, ಆರೋಪಿಗಳು ನೀರಜ್ ನನ್ನು ತಾವಿರುವ ಸ್ಥಳಕ್ಕೆ ಬರಲು ಹೇಳಿದ್ದರು. ನಂತರ ತಮ್ಮ ಸೋದರಿಗೆ ಕೂಡಲೇ ಕರೆ ಮಾಡಿ ನೀನು ಸದ್ಯದಲ್ಲಿಯೇ ಅಳುತ್ತಿ ನೋಡುತ್ತಿರು ಎಂದು ಹೇಳಿ ಕರೆ ಕಡಿತ ಮಾಡಿದ್ದರು. ಹುಡುಗಿಯನ್ನು ಮದುವೆಯಾದಾಗಿನಿಂದ ಆಕೆಯ ಸೋದರರು ನನ್ನ ತಮ್ಮನಿಗೆ ಬೆದರಿಕೆ ಹಾಕುತ್ತಲೇ ಇದ್ದರು. ಪೊಲೀಸರಿಗೆ ನಾವು ದೂರು ನೀಡಿ ರಕ್ಷಣೆ ಕೊಡಿ ಎಂದು ಕೇಳಿದ್ದೆವು. ಆದರೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಲೆ ಮಾಡುತ್ತೇವೆ ಎಂದು ಇನ್ನೂ ಬೆದರಿಕೆ ಹಾಕುತ್ತಿದ್ದಾರೆ ಎಂದರು.

ಯುವಕ ಮತ್ತು ಯುವತಿಯ ಮನೆಯವರು ಪಂಚಾಯತ್ ಮಾತುಕತೆಯಲ್ಲಿ ಒಪ್ಪಿ ಬರವಣಿಗೆ ಮೂಲಕ ಮದುವೆಗೆ ಒಪ್ಪಿಗೆ ನೀಡಿದ್ದರು. ಆದರೆ ಮಹಿಳೆಯ ಸೋದರರು ಅನುಮತಿ ಕೊಟ್ಟಿರಲಿಲ್ಲ. ಬೆದರಿಕೆ ಹಾಕುತ್ತಲೇ ಇದ್ದರು ಎನ್ನುತ್ತಾರೆ ಡಿಎಸ್ಪಿ ಸತೀಶ್ ಕುಮಾರ್ ವಾಟ್ಸ್.

ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ನೀರಜ್ ನ ಮದುವೆ ಗ್ರಾಮದ ಮುಖ್ಯಸ್ಥರು ಪಂಚಾಯತಿಗೆ ನಡೆಸಿ ಮಾತುಕತೆಯಾಗಿ ನೆರವೇರಿತ್ತು.

ಕೆಲ ದಿನ ಹಿಂದಷ್ಟೇ ರೋಹ್ಟಕ್ ನಲ್ಲಿ ಅಂತರ್ಜಾತಿ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಸಿಟ್ಟಿನಿಂದ ಯುವತಿಯ ಮಾವ ಗುಂಡಿಕ್ಕಿ ಆಕೆಯನ್ನು ಹತ್ಯೆ ಮಾಡಿದ್ದು, ಆಕೆಯ ಪ್ರಿಯಕರನಿಗೆ ಗಂಭೀರ ಗಾಯಗಳಾದ ಪ್ರಕರಣ ನಡೆದಿತ್ತು. ಇಲ್ಲಿ ಯುವಕ-ಯುವತಿ ಜಾಟ್ ಸಮುದಾಯವಾಗಿದ್ದರೂ ಕೂಡ ಬೇರೆ ಬೇರೆ ಗ್ರಾಮದವರಾಗಿದ್ದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp