ಹೊಸ ವರ್ಷದ ಷೋನಲ್ಲಿ ಅಮಿತ್ ಶಾ, ಹಿಂದೂ ದೇವರ ಅಪಹಾಸ್ಯ: ಕಾಮಿಡಿಯನ್ ಬಂಧನ
ಹೊಸ ವರ್ಷದ ಷೋವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ ಆರೋಪದ ಮೇರೆಗೆ ಮುಂಬೈ ಮೂಲದ ಕಾಮಿಡಿಯನ್ ಮತ್ತು ನಾಲ್ಕು ಮಂದಿ ಕಾರ್ಯಕ್ರಮ ಆಯೋಜಕರನ್ನು ಬಂಧಿಸಲಾಗಿದೆ.
Published: 03rd January 2021 11:42 AM | Last Updated: 03rd January 2021 11:42 AM | A+A A-

ಹಾಸ್ಯ ಕಲಾವಿದ ಮುನ್ವಾರ್
ಇಂದೋರ್: ಹೊಸ ವರ್ಷದ ಷೋವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿದ ಆರೋಪದ ಮೇರೆಗೆ ಮುಂಬೈ ಮೂಲದ ಕಾಮಿಡಿಯನ್ ಮತ್ತು ನಾಲ್ಕು ಮಂದಿ ಕಾರ್ಯಕ್ರಮ ಆಯೋಜಕರನ್ನು ಬಂಧಿಸಲಾಗಿದೆ.
ಹಾಸ್ಯ ಕಲಾವಿದ ಷೋನಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದಾಗ ಅಲ್ಲಿಯೇ ಇದ್ದ ಹಿಂದೂ ಪರ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ಮುಂದುವರೆಯದಂತೆ ತಡೆದಿದ್ದಾರೆ.
ಇಲ್ಲಿನ ಪ್ರಸಿದ್ಧ 56 ಡುಕಾನ್ ಕೆಫೆಯಲ್ಲಿ ಪ್ರದರ್ಶನಕ್ಕೆ ಸಂಬಧಿಸಿದಂತೆ ಕಾಮಿಡಿಯನ್ ಮುನ್ವಾರ್ ಫಾರೂಕಿ ಹಾಗೂ ಇಂದೋರ್ ಮೂಲದ ಪ್ರಕಾರ್ ವ್ಯಾಸ, ಪ್ರಿಯಾಂ ವ್ಯಾಸ್, ನಳಿನ್ ಯಾದವ್ ಮತ್ತು ಕಾರ್ಯಕ್ರಮ ಸಮನ್ವಯಾಧಿಕಾರಿ ಎಡ್ವಿನ್ ಆಂಟೋನಿ ಎಂಬವರನ್ನು ಬಂಧಿಸಲಾಗಿದೆ.
ಬಂಧಿತರ ವಿರುದ್ಧ ಐಪಿಸೆ ಸೆಕ್ಷನ್ 188, 269, 34 ಮತ್ತು 295 ಅಡಿಯಲ್ಲಿ ಕೋವಿಡ್ -19 ನಿಯಮ ಉಲ್ಲಂಘನೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಂದೋರಿನ ತುಕೊಗಾಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಕಲ್ಮೇಶ್ ಶರ್ಮಾ ತಿಳಿಸಿದ್ದಾರೆ.
ಹಿಂದೂ ರಕ್ಷ ಸಂಘಟನೆಯ ಮುಖಂಡ ಏಕಲವ್ಯ ಗೌರ್ ಮತ್ತು ಬಿಜೆಪಿ ಶಾಸಕ ಮಾಲಿನ ಗೌರ್ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದೆ. ಗೋದ್ರಾ ಹತ್ಯಕಾಂಡ ಘಟನೆ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಹೆಸರನ್ನು ಎಳೆದು ಹಿಂದೂ ದೇವರು- ದೇವತೆಗಳ ಮೇಲೆ ಪಾರೂಖಿ ಅಪಹಾಸ್ಯ ಮಾಡಿದ್ದಾಗಿ ಗೌರ್ ತಿಳಿಸಿದ್ದಾರೆ.