ಭಾರತೀಯ ಸೇನೆಯ ಸಶಸ್ತ್ರ ಪಡೆಗಳನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ಜ.ಬಿಪಿನ್ ರಾವತ್ 

ಭಾರತೀಯ ಸೇನೆಯ ಯೋಧರ ಕರ್ತವ್ಯದಿಂದ ವಿಮುಖವಾಗಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಭಾರತದ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

Published: 03rd January 2021 12:30 PM  |   Last Updated: 03rd January 2021 12:44 PM   |  A+A-


General Bipin Rawat with soldiers

ಯೋಧರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಜ.ಬಿಪಿನ್ ರಾವತ್

Posted By : Sumana Upadhyaya
Source : PTI

ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಯೋಧರ ಕರ್ತವ್ಯದಿಂದ ವಿಮುಖವಾಗಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಭಾರತದ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಅವರು ನಿನ್ನೆ ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆ ಬಳಿ ಫಾರ್ವರ್ಡ್ ವಾಯುಪಡೆ ನೆಲೆಗಳಲ್ಲಿ ಭಾರತೀಯ ಮಿಲಿಟರಿಯ ತಯಾರಿಯನ್ನು ಪರಾಮರ್ಶೆ ನಡೆಸಿದರು. ಕಳೆದ 8 ತಿಂಗಳಿನಿಂದ ಪೂರ್ವ ಲಡಾಕ್ ನಲ್ಲಿ ಭಾರತ-ಚೀನಾ ಸೇನೆಗಳು ನಿಯೋಜನೆಗೊಂಡಿವೆ.

ಜನರಲ್ ರಾವತ್ ಅವರು ನಿನ್ನೆ ಕೆಲವು ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಮಿಲಿಟರಿ ಕಮಾಂಡರ್‌ಗಳು ಈ ಪ್ರದೇಶದ ಭದ್ರತಾ ಮ್ಯಾಟ್ರಿಕ್ಸ್‌ನ ಪ್ರಮುಖ ಅಂಶಗಳ ಬಗ್ಗೆ ವಿವರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೂರ್ವ ವಲಯದಲ್ಲಿನ ವಾಯುಪಡೆ ನೆಲೆಗಳ ಫಾರ್ವರ್ಡ್ ಪ್ರದೇಶಗಳಿಗೆ ಜನರಲ್ ರಾವತ್ ಅವರು ಭೇಟಿ ನೀಡಿದರು. ವಿಶೇಷ ಗಡಿನಾಡು ಪಡೆ, ಸೈನ್ಯ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸಿಬ್ಬಂದಿಗಳು ಡಿಬಾಂಗ್ ಕಣಿವೆ ಮತ್ತು ಲೋಹಿತ್ ವಲಯದ "ಫಾರ್ವರ್ಡ್ ಮೋಸ್ಟ್ ಏರ್ ಮ್ಯಾನೇಜ್ಮೆಂಟ್ ಹುದ್ದೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

ಗಡಿಗಳನ್ನು ಕಾಪಾಡುವ ಕರ್ತವ್ಯದ ಎಲ್ಲೆಯನ್ನು ಮೀರಿ ಹೋಗಲು ಇಚ್ಛಿಸುವ ಇಂತಹ ಸವಾಲಿನ ಸಂದರ್ಭಗಳಲ್ಲಿ ಭಾರತೀಯ ಸೈನಿಕರು ಮಾತ್ರ ಜಾಗರೂಕರಾಗಿರಬಹುದು. ಕರ್ತವ್ಯಕ್ಕಾಗಿ ತಮ್ಮ ಕರೆಯಲ್ಲಿ ಅಚಲವಾಗಿ ಉಳಿಯಲು ಭಾರತೀಯ ಸಶಸ್ತ್ರ ಪಡೆಗಳನ್ನು ತಡೆಯಲು ಯಾವುದಕ್ಕೂ ಸಾಧ್ಯವಿಲ್ಲ ಎಂದು ಜ.ರಾವತ್ ಅವರು ಹೇಳಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಲಡಾಖ್ ನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರು ನಿಲುಗಡೆ ಹೊಂದಿರುವ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ಚೀನಾದೊಂದಿಗೆ ಸುಮಾರು 3,500 ಕಿ.ಮೀ.ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಹೆಚ್ಚಿನ ಕಾರ್ಯಾಚರಣೆಯ ಸಿದ್ಧತೆಯನ್ನು ಕಾಯ್ದುಕೊಂಡಿರುವ ಸಮಯದಲ್ಲಿ ಜ.ಬಿಪಿನ್ ರಾವತ್ ಸ್ಥಳಕ್ಕೆ ಭೇಟಿ ನೀಡಿ ಪರಾಮರ್ಶೆ ನಡೆಸಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp