ಮಂಗಳೂರು: ಮದುವೆಗೆ ಹೊರಟಿದ್ದವರು ಮಸಣಕ್ಕೆ; ಮನೆ ಮೇಲೆ ಉರುಳಿದ ಬಸ್, 7 ಮಂದಿ ದುರ್ಮರಣ

ಮದುವೆಗೆ ಹೊರಟಿದ್ದ ಬಸ್ ರಸ್ತೆ ಬದಿಯಿದ್ದ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಏಳು ಮಂದಿ ದುರ್ಮರಣ ಹೊಂದಿದ್ದಾರೆ.

Published: 03rd January 2021 04:48 PM  |   Last Updated: 03rd January 2021 04:48 PM   |  A+A-


Incident Photo

ಅಪಘಾತದ ದಶ್ಯ

Posted By : Vishwanath S
Source : The New Indian Express

ಮಂಗಳೂರು: ಮದುವೆಗೆ ಹೊರಟಿದ್ದ ಬಸ್ ರಸ್ತೆ ಬದಿಯಿದ್ದ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಏಳು ಮಂದಿ ದುರ್ಮರಣ ಹೊಂದಿದ್ದಾರೆ. 

ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪ್ಲಳ್ಳಿ ಬಳಿ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ 63 ಮಂದಿ ಬಸ್ ನಲ್ಲಿ ತೆರಳುತ್ತಿತ್ತು. ಆದರೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮನೆಯ ಮೇಲೆ ಉರುಳಿ ಬಿದ್ದಿದೆ. 

ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದು ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೇರಳ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

100%

ಮೃತರನ್ನು ಆದರ್ಶ್(12), ಶ್ರೇಯಸ್(13), ರವಿಚಂದ್ರನ್(40), ರಾಜೇಶ್(45), ಸುಮತಿ(50), ಜಯಲಕ್ಷ್ಮಿ(39) ಮತ್ತು ಸಸೀಂದ್ರ ಪೂಜಾರ(43) ಮೃತ ದುರ್ದೈವಿಗಳು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp