ಕೋವಿಡ್-19: ಕೋವಿಶೀಲ್ಡ್ ಲಸಿಕೆ ತಯಾರಿಕೆಗೆ ಸೆರಂ ಇನ್ಸ್ ಟಿಟ್ಯೂಟ್ ಗೆ ಡಿಸಿಜಿಐ ಅನುಮತಿ
ಮಾರಕ ಕೊರೋನಾ ವೈರಸ್ ಸೋಂಕಿತರಿಗೆ ತುರ್ತು ಬಳಕೆಗಾಗಿ ಕೋವಿಶೀಲ್ಡ್ ಲಸಿಕೆಗೆ ಅನುಮತಿ ದೊರೆತ ಬೆನ್ನಲ್ಲೇ ಕೋವಿಶೀಲ್ಡ್ ಲಸಿಕೆ ತಯಾರಿಕೆ ಮಾಡುವ ಸಂಬಂಧ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.
Published: 04th January 2021 11:18 AM | Last Updated: 04th January 2021 11:18 AM | A+A A-

ಕೋವಿ ಶೀಲ್ಡ್ ಲಸಿಕೆ
ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿತರಿಗೆ ತುರ್ತು ಬಳಕೆಗಾಗಿ ಕೋವಿಶೀಲ್ಡ್ ಲಸಿಕೆಗೆ ಅನುಮತಿ ದೊರೆತ ಬೆನ್ನಲ್ಲೇ ಕೋವಿಶೀಲ್ಡ್ ಲಸಿಕೆ ತಯಾರಿಕೆ ಮಾಡುವ ಸಂಬಂಧ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.
ಈ ನಿನ್ನೆಯಷ್ಟೇ ಡಿಸಿಜಿಐ ಆಕ್ಸ್‌ಫರ್ಡ್ ನ ಕೊರೊನಾ ವೈರಸ್ ಲಸಿಕೆ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಗಳನ್ನು ತುರ್ತುಬಳಕೆಗೆ ನೀಡಲು ಅನುಮತಿ ನೀಡಿದ 24 ಗಂಟೆಗಳೊಳಗೆ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಕೋವಿಶೀಲ್ಜ್ ಲಸಿಕೆ ತಯಾರಿಕೆ ಮಾಡಲು ಅನುಮತಿ ದೊರೆತಿದೆ.
ಆಕ್ಸ್‌ಫರ್ಡ್ ಸಂಸ್ಥೆ ಅಭಿವೃದ್ಧಿಪಡಿಸಿದ ChAdOx1 nCov-2019 ಕೊರೊನಾವೈರಸ್ ಲಸಿಕೆ 56-69 ವರ್ಷ ವಯಸ್ಸಿನ ಆರೋಗ್ಯವಂತ ವಯಸ್ಕರಲ್ಲಿ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ರೋಗನಿರೋಧಕ ಸಾಮರ್ಥ್ಯವನ್ನು ಪ್ರಚೋದಿಸುತ್ತದೆ ಎಂದು ಪುಣೆ ಮೂಲದ ಕಂಪನಿ ಈ ಹಿಂದೆ ತಿಳಿಸಿತ್ತು.
ಮೂಲಗಳ ಪ್ರಕಾರ, ಕೋವಿಶೀಲ್ಡ್ ಲಸಿಕೆ ತಯಾರಕ ಸಂಸ್ಥೆ, ಸರ್ಕಾರಕ್ಕೆ ಪೂರೈಸುವ ಮೊದಲ 100 ಮಿಲಿಯನ್ ಲಸಿಕೆಗಳಿಗೆ ಪ್ರತಿ ಡೋಸ್‌ಗೆ 200 ರೂ ವಿಶೇಷ ದರವನ್ನು ವಿಧಿಸಲು ಯೋಜಿಸಿದೆ. ಆದರೆ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 1,000ರೂ ದರದಲ್ಲಿ ನಿಗದಿಪಡಿಸಲು ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ 300 ಮಿಲಿಯನ್ 400 ಮಿಲಿಯನ್ ಡೋಸ್ ಲಸಿಕೆಗಾಗಿ ಸಂಸ್ಥೆಯೊಂದಿಗೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯಲ್ಲಿದೆ.
Drugs Controller General of India grants permission to Serum Institute of India to manufacture its COVID-19 vaccine 'Covishield' pic.twitter.com/qRX3ZI9xai
— ANI (@ANI) January 4, 2021