ಕುಡಿದ ಮತ್ತಿನಲ್ಲಿ ತಾಯಿ-ಮಗಳ ಮೇಲೆ ಅತ್ಯಾಚಾರ; ರೇಪ್ ವಿಡಿಯೋ ಹರಿಬಿಟ್ಟ ಕೀಚಕ!
ಕುಡಿದ ಮತ್ತಿನಲ್ಲಿ ತಾಯಿ-ಮಗಳ ಮೇಲೆ ಕೀಚಕರು ಅತ್ಯಾಚಾರ ನಡೆಸಿದ್ದು ಇದನ್ನು ವಿಡಿಯೋ ಮಾಡಿ ವ್ಯಕ್ತಿಯೋರ್ವ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
Published: 04th January 2021 04:17 PM | Last Updated: 04th January 2021 05:04 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಕುಡಿದ ಮತ್ತಿನಲ್ಲಿ ತಾಯಿ-ಮಗಳ ಮೇಲೆ ಕೀಚಕರು ಅತ್ಯಾಚಾರ ನಡೆಸಿದ್ದು ಇದನ್ನು ವಿಡಿಯೋ ಮಾಡಿ ವ್ಯಕ್ತಿಯೋರ್ವ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಡಿಸೆಂಬರ್ 29 ಮತ್ತು 30ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ವಿಡಿಯೋ ವೈರಲ್ ಆಗಿದ್ದು ಇದರ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ಬೀದಿಬದಿಯಲ್ಲಿ ಮಲಗಿದ್ದ ತಾಯಿ ಮತ್ತು ಮಗಳ ಮೇಲೆ ಇಬ್ಬರು ಕುಡುಕರು ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತೆಯರನ್ನು ರಕ್ಷಿಸಬೇಕಿದ್ದ ಸ್ಥಳೀಯರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇನ್ನು ಅತ್ಯಾಚಾರಿಗಳಾದ ವಾಜಿಪುರದ ಅಮಿತ್ ಮತ್ತು ಜಹಂಗಿರ್ ಪುರಿಯ ಸೋನು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಸಹ ಪೊಲೀಸರು ಹುಡುಕುತ್ತಿದ್ದಾರೆ.
ಸಂತ್ರಸ್ತೆಯರಾದ 35 ವರ್ಷದ ತಾಯಿ ಮತ್ತು 18 ವರ್ಷದ ವಿಕಲಾಂಗ ಮಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇವರು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.