'ರಾಜಕೀಯ ಅಸೂಯೆ'ಯಿಂದ ಲಾಲು ಯಾದವ್ ಬಿಹಾರ ಸರ್ಕಾರವನ್ನು 'ಅಸ್ಥಿರಗೊಳಿಸುತ್ತಿದ್ದಾರೆ': ಸುಶೀಲ್ ಮೋದಿ

ರಾಂಚಿಯ ಜೈಲಿನಲ್ಲಿದ್ದುಕೊಂಡೇ ಬಿಹಾರದ ಮಾಜಿ ಸಿಎಂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಬಿ ಜೆಪಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ. 

Published: 04th January 2021 04:17 PM  |   Last Updated: 04th January 2021 04:52 PM   |  A+A-


Posted By : Raghavendra Adiga
Source : The New Indian Express

ಪಾಟ್ನಾ: ರಾಂಚಿಯ ಜೈಲಿನಲ್ಲಿದ್ದುಕೊಂಡೇ ಬಿಹಾರದ ಮಾಜಿ ಸಿಎಂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಬಿ ಜೆಪಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ. 

ಲಾಲು ಜೈಲು ನಿಯಮಗಳನ್ನು ಉಲ್ಲಂಘಿಸಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಮೋದಿ 'ಯೋಜನೆ'ಬದ್ದವಾಗಿ ಹೇಗೆ ನಡೆಯಬೇಕು ಎಂದು ಮಾಜಿ ಸಿಎಂತಮ್ಮ ಪಕ್ಷದ ಸದಸ್ಯರಿಗೆ ಫೋನ್ ಮೂಲಕ ನಿಯಮಿತವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು. ಈ ಹಿಂದೆ ಸುಶೀಲ್ ಮೋದಿ ವಿಧಾನಸಭಾ ಸ್ಪೀಕರ್ ಚುನಾವಣೆಯ ಸಮಯದಲ್ಲಿ ಗೈರು ಹಾಜರಾಗುವಂತೆ ಯಾದವ್ ಬಿಜೆಪಿ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿದ ಘಟನೆಯನ್ನು ನಾವಿಲ್ಲಿ ಸ್ಮರಿಸಬಹುದು. 

ಸುಮಾರು ಎರಡು ದಶಕಗಳಿಂದ ಬಿಹಾರ ಮತ್ತು ಜೆಡಿಯು ನಡುವಿನ ಬಲವಾದ ಮೈತ್ರಿ ರಾಜ್ಯದಲ್ಲಿ ಬೇರುಬಿಟ್ಟಿದೆ ಆದರೆ ಅಲ್ಲಿನ 'ರಾಜಕೀಯ ಅಸೂಯೆ' ಯಲ್ಲಿ ಆರ್ ಜೆಡಿ ಹೊತ್ತಿ ಉರಿಯುತ್ತಿದೆ, ಎಂದು ಮೋದಿ ಹೇಳಿದರು.

"ಒಂದು ಸಣ್ಣ ಕೆಟ್ಟಸಮಯ ಬಂದು ಹಾದುಹೋಯಿತು ಆದರೆ ಜನರು ಮತ್ತೊಮ್ಮೆ ರಾಜ್ಯಕ್ಕೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ್ದಾರೆ" ಎಂದು ಅವರು ಹೇಳಿದರು. ಎನ್‌ಡಿಎ ಮೇಲಿನ ಪರಸ್ಪರ ಗೌರವ ಮತ್ತು ವಿಶ್ವಾಸವು ಮೈತ್ರಿಯನ್ನು ಮುನಡೆಸುತ್ತದೆ ರಾಜ್ಯವನ್ನು 'ಕರಾಳ ಯುಗ'ಗಳಿಂದ ರಕ್ಷಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.

“ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ತಲುಪಿದೆ. ಬಿಹಾರವು ಲಾಟೀನು ಯುಗದಿಂದ ಹೊರಬಂದಿದೆ. ರಾಜ್ಯಕ್ಕೆ ಉನ್ನತ ಶಿಕ್ಷಣದ ಹೊಸ ಸಂಸ್ಥೆಗಳು ಸಿಕ್ಕಿದೆ,.  ಆದರೆ ಅದನ್ನೆಲ್ಲ ಮತ್ತೆ ಹಾಳು ಮಾಡುವುದೇ ಪ್ರತಿಪಕ್ಷಗಳ ಅಜೆಂಡಾ ಆಗಿದೆ." ಎಂದು ಅವರು ಹೇಳಿದರು. 20 ಲಕ್ಷ ಜನರಿಗೆ ಉದ್ಯೋಗ ನೀಡುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ, ಕೈಗಾರಿಕಾ ಇಲಾಖೆ ಒನ್ ವಿಂಡೋ ವ್ಯವಸ್ಥೆಯನ್ನು' ಪರಿಚಯಿಸಲು ಉದ್ದೇಶಿಸಿದೆ ಎಂದು ಮೋದಿ ಹೇಳಿದರು.

ಎನ್‌ಡಿಎಯನ್ನು ತ್ಯಜಿಸಿದ ನಂತರ ನಿತೀಶ್ ಕುಮಾರ್‌ಗೆ ಮಹಾಘಟಬಂಧನ್ ಸೇರಲು ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿಪಕ್ಷದ ನಿಯೋಜಿತ ಪ್ರಧಾನಿ ಅಭ್ಯರ್ಥಿಯಾಗಲು ಆರ್‌ಜೆಡಿ ಈ ಹಿಂದೆ ಅವಕಾಶ ನೀಡಿತ್ತು, ಬಿಹಾರದ ಮುಂದಿನ ಸಿಎಂ ಆಗಿ ತೇಜಶ್ವಿ ಯಾದವ್‌ಗೆ ಬೆಂಬಲ ಸೂಚಿಸುವುದಕ್ಕೆ ಬದಲಿಯಾಗಿ ಈ ಆಫರ್ ನೀಡಲಾಗಿತ್ತು.  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಜೆಡಿ-ಯುಗೆ ಯಾರ ಸಹಾಯವೂ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. "ನಮ್ಮ ಬಲದಿಂದಲೇ ನಾವು ಮುಂದೆ ನಡೆಯುತ್ತೇವೆಎಂದು ಸಿಂಗ್ ಹೇಳಿದರು.

ಅರುಣಾಚಲ ಪ್ರದೇಶದ ಘಟನೆಯ ನಂತರ ಜೆಡಿಯು, ಬಿಜೆಪಿ ಸಂಬಂಧಗಳ ಬಗ್ಗೆ ಊಹಾಪೋಹಗಳು ಆರಂಬವಾದ ನಡುವೆಯೇ ಸಿಎಂ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯಾದ ರಾಜ್‌ಗೀರ್‌ನಲ್ಲಿ ಕೇಸರಿ ಪಕ್ಷವು ತನ್ನ ತಂಡಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ. ಹೊಸದಾಗಿ ನೇಮಕಗೊಂಡ ಜಿಲ್ಲಾಧಿಕಾರಿ  ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳಿಗೆ ಜನವರಿ 9 ರಂದು ನಳಂದದ ತರಬೇತಿ ಶಿಬಿರದಲ್ಲಿ ತರಬೇತಿ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.ಏತನ್ಮಧ್ಯೆ, ಕಾಂಗ್ರೆಸ್ ಮುಖಂಡ ಪ್ರೇಮಚಂದ್ರ ಮಿಶ್ರಾ ಜೆಡಿಯುಗೆ ಎಚ್ಚರಿಕೆ ನೀಡಿದ್ದು ಮುಂಬರುವ ತರಬೇತಿ ಅಧಿವೇಶನಕ್ಕೆ ಮುಂಚಿತವಾಗಿ ಬಿಜೆಪಿಯ ಉದ್ದೇಶಗಳ ಬಗ್ಗೆ ಮುಖ್ಯಮಂತ್ರಿಗಳು ಎಚ್ಚರದಿಂದಿರಬೇಕು ಎಂದಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp