ಪೊಂಗಲ್ ಹಬ್ಬ: ಚಿತ್ರಮಂದಿರ ಶೇ.100 ಭರ್ತಿಗೆ ತಮಿಳುನಾಡು ಸರ್ಕಾರ ಅನುಮತಿ; ತಜ್ಞರ ವಿರೋಧ

ಪೊಂಗಲ್ ನಿಂದ ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು ಈ ಕ್ರಮವನ್ನು ಸಾರ್ವಜನಿಕ ಆರೋಗ್ಯ ತಜ್ಞರು ವಿರೋಧಿಸಿದ್ದಾರೆ.

Published: 04th January 2021 03:11 PM  |   Last Updated: 04th January 2021 04:39 PM   |  A+A-


Representation purpose only

ಸಂಗ್ರಹ ಚಿತ್ರ

Posted By : Vishwanath S
Source : The New Indian Express

ಚೆನ್ನೈ: ಪೊಂಗಲ್ ನಿಂದ ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು ಈ ಕ್ರಮವನ್ನು ಸಾರ್ವಜನಿಕ ಆರೋಗ್ಯ ತಜ್ಞರು ವಿರೋಧಿಸಿದ್ದಾರೆ.

ಜನವರಿ 13ರಂದು ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಗೆ ಚಿತ್ರಮಂದಿರದಲ್ಲಿನ ಆಸನಗಳ ಸಂಪೂರ್ಣ ಭರ್ತಿಗೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಹೀಗಾಗಿ ತಮಿಳುನಾಡು ಸರ್ಕಾರದ ನೂರು ಪ್ರತಿಶತದಷ್ಟು ಆಸನಗಳ ಭರ್ತಿಗೆ ಅನುಮತಿಸಿದೆ.

ವಿಜಯ್ ಅಭಿನಯದ ಮಾಸ್ಟರ್ ಚಿತ್ರದ ಜೊತೆಗೆ ಸಿಂಬು ಅಭಿನಯದ ಈಶ್ವರನ್ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ.

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಮಾಸ್ಟರ್' ಚಿತ್ರದ ಟೀಸರ್ 

ಸರ್ಕಾರದ ಕ್ರಮವನ್ನು ಖಂಡಿಸಿರುವ ತಜ್ಞರು ಬಹಳ ಗಂಟೆಗಳವರೆಗೆ ಜನರು ಮುಚ್ಚಿದ ಸ್ಥಳಗಳಲ್ಲಿ ಇರುವುದು ಸುರಕ್ಷಿತವಲ್ಲ. ಇದು ಕೊರೋನಾ ಪ್ರಕರಣಗಳು ಹೆಚ್ಚಾಗಲು ಕಾರಣವಾಗಬಹುದು ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ತಜ್ಞ ರಾಮ್ ಗೋಪಾಲಕೃಷ್ಣನ್ ಮಾತನಾಡಿ, ಚಿತ್ರಮಂದಿರಗಳಲ್ಲಿ 100 ಪ್ರತಿಶತ ಹಾಜರಾತಿಗೆ ಅವಕಾಶ ನೀಡುವುದು ಸೂಕ್ತವಲ್ಲ ಮತ್ತು ಇದು ಪ್ರಕರಣಗಳು ಹೆಚ್ಚಾಗಲು ಕಾರಣವಾಗಬಹುದು ಎಂದರು. ಇನ್ನು ಕೊರೋನಾ ಲಸಿಕೆ ಬಂದ ನಂತರ ಈ ಕ್ರಮವನ್ನು ಮುಂದುವರಿಸುವುದು ಉತ್ತಮ ಎಂದು ರಾಮ್ ಗೋಪಾಲಕೃಷ್ಣನ್ ಹೇಳಿದ್ದಾರೆ. 

ಪ್ರೇಕ್ಷಕರು ಪಾಪ್‌ಕಾರ್ನ್ ಮತ್ತು ಇತರ ತಿಂಡಿಗಳನ್ನು ತಿನ್ನಲು ಮಾಸ್ಕ್ ಗಳನ್ನು ತೆಗೆದುಹಾಕುತ್ತಾರೆ. ಇದು ಅಪಾಯಕಾರಿ. ಕಡ್ಡಾಯ ಮಾಸ್ಕ್ ಧರಿಸುವುದು, ಚಿತ್ರಮಂದಿರಗಳಲ್ಲಿ ತಿಂಡಿತಿನಿಸುಗಳಿಗೆ ಅವಕಾಶ ನೀಡದಿರುವ ಮೂಲಕ ಹರಡುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದರೆ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಇದು ಅಪಾಯಕಾರಿ ಎಂದು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp