'ಬೈಬಲ್ ಮತ್ತು ಭಗವದ್ಗೀತೆ ಮಧ್ಯೆ ಯಾವುದನ್ನು ಆರಿಸಿಕೊಳ್ಳುತ್ತೀರಿ, ನಿರ್ಧರಿಸಿ': ತೆಲಂಗಾಣ ಬಿಜೆಪಿ ಅಧ್ಯಕ್ಷ ವಿವಾದಾಸ್ಪದ ಹೇಳಿಕೆ
ತಿರುಪತಿ ಲೋಕಸಭೆ ಉಪ ಚುನಾವಣೆಗೆ ಮುನ್ನ ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಮತದಾರರು ಬೈಬಲ್ ಮತ್ತು ಭಗವದ್ಗೀತೆ ಮಧ್ಯೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದ್ದಾರೆ.
Published: 05th January 2021 10:11 AM | Last Updated: 05th January 2021 12:40 PM | A+A A-

ಬಂಡಿ ಸಂಜಯ್ ಕುಮಾರ್
ಹೈದರಾಬಾದ್: ತಿರುಪತಿ ಲೋಕಸಭೆ ಉಪ ಚುನಾವಣೆಗೆ ಮುನ್ನ ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಮತದಾರರು ಬೈಬಲ್ ಮತ್ತು ಭಗವದ್ಗೀತೆ ಮಧ್ಯೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದ್ದಾರೆ.
ಒಸ್ಮಾನಿಯಾ ವಿಶ್ವವಿದ್ಯಾಲಯದ(ಒಯು) ಜೆಎಸಿ ನಾಯಕ ದರುವು ಎಲ್ಲನ್ನ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವೈಎಸ್ ಆರ್ ಸಿ ವಿರುದ್ಧ ವಾಗ್ದಾಳಿ ನಡೆಸುತ್ತಾ, ಆಂಧ್ರ ಪ್ರದೇಶದಲ್ಲಿ ಆಡಳಿತಾರೂಢ ಸರ್ಕಾರವನ್ನು ತಿರುಮಲವನ್ನು ಎರಡು ಪರ್ವತಕ್ಕೆ ಹೋಲಿಸಿದರು, ನಂತರ ಬಿಜೆಪಿಯ ಕಾರ್ಯಕ್ರಮ ಮತ್ತು ನೀತಿಗಳನ್ನು ಗೋವಿಂದ ಮತ್ತು ಏಳು ಬೆಟ್ಟಗಳಲ್ಲಿ ವಾಸಿಸುವ ದೇವರಿಗೆ ಹೋಲಿಸಿ ಮಾತನಾಡಿದರು. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತೆಲಂಗಾಣದಲ್ಲಿ ನಿರ್ದಿಷ್ಟ ಧರ್ಮವನ್ನು ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದು ಧರ್ಮ ಆಂಧ್ರ ಪ್ರದೇಶ ಸರ್ಕಾರವಾಗಿದೆ, ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಒಂದು ಧರ್ಮವನ್ನು ಪ್ರೋತ್ಸಾಹಿಸುತ್ತಿದ್ದರೆ, ಹಿಂದೂಗಳು ಈ ಉಪ ಚುನಾವಣೆಯಲ್ಲಿ ವೋಟ್ ಬ್ಯಾಂಕ್ ಆಗಲಿದ್ದಾರೆ ಎಂದರು.
ಹಿಂದೂ ದೇವಾಲಯಗಳ ಮೇಲಿನ ದಾಳಿಯ ಘಟನೆಯನ್ನು ಉಲ್ಲೇಖಿಸಿದ ಅವರು, ಆಂಧ್ರ ಪ್ರದೇಶ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಇಲ್ಲದಿದ್ದರೆ ನೀವು ಖಂಡಿತಾ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ಕಾರ್ಯಕರ್ತರು ಬೀದಿಗೆ ಬಂದು ವಂದೇ ಮಾತರಂ, ಜೈ ಶ್ರೀರಾಂ, ಭಾರತ್ ಮಾತಾ ಕಿ ಜೈ ಪಠಿಸಿದರೆ ವೈಎಸ್ ಆರ್ ಸಿಪಿ ತಮ್ಮ ಕಚೇರಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.