ದೆಹಲಿ ಗಲಭೆ: ಉಮರ್ ಖಾಲಿದ್, ತಾಹಿರ್ ಹುಸೇನ್ ಇತರರಿಂದ ಸಂಚು ಮೇಲ್ನೋಟಕ್ಕೆ ಕಂಡಿದೆ: ಕೋರ್ಟ್

ದೆಹಲಿಯಲ್ಲಿ ಸಿಎಎ, ಎನ್ಆರ್ ಸಿ ವಿರೋಧಿಸಿ ನಡೆದಿದ್ದ ಪ್ರತಿಭಟನೆ, ಹಿಂಸಾಚಾರ, ಕೋಮುಗಲಭೆಗೆ ತಿರುಗಿದ್ದರಲ್ಲಿ ಜೆಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಅಮಾನತುಗೊಂಡಿರುವ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ಹಾಗೂ ಇತರರ ಪಿತೂರಿ ಇರುವುದಕ್ಕೆ ಆಧಾರಗಳು ಮೇಲ್ನೋಕ್ಕೆ ಕಂಡುಬರುತ್ತಿದೆ. 

Published: 05th January 2021 09:51 PM  |   Last Updated: 05th January 2021 09:51 PM   |  A+A-


Delhi riots: Prima facie Umar Khalid, Tahir Hussain, others conspired together, says court

ದೆಹಲಿ ಗಲಭೆ: ಉಮರ್ ಖಾಲಿದ್, ತಾಹಿರ್ ಹುಸೇನ್ ಇತರರಿಂದ ಸಂಚು ಮೇಲ್ನೋಟಕ್ಕೆ ಕಂಡಿದೆ: ಕೋರ್ಟ್

Posted By : Srinivas Rao BV
Source : The New Indian Express

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್ಆರ್ ಸಿ ವಿರೋಧಿಸಿ ನಡೆದಿದ್ದ ಪ್ರತಿಭಟನೆ, ಹಿಂಸಾಚಾರ, ಕೋಮುಗಲಭೆಗೆ ತಿರುಗಿದ್ದರಲ್ಲಿ ಜೆಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಅಮಾನತುಗೊಂಡಿರುವ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ಹಾಗೂ ಇತರರ ಪಿತೂರಿ ಇರುವುದಕ್ಕೆ ಆಧಾರಗಳು ಮೇಲ್ನೋಕ್ಕೆ ಕಂಡುಬರುತ್ತಿದೆ ಎಂದು  ದೆಹಲಿ ಕೋರ್ಟ್ ಅಭಿಪ್ರಾಯಪಟ್ಟಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಚಾರ್ಜ್ ಶೀಟ್ ನ್ನು ಪರಿಗಣಿಸಿರುವ ದೆಹಲಿ ಕೋರ್ಟ್ ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್, ಖಜೂರಿ ಖಾಸ್ ಪ್ರದೇಶದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉಮರ್ ಖಾಲಿದ್ ವಿರುದ್ಧ ತನಿಖೆ ನಡೆಸುವುದಕ್ಕೆ ಯೋಗ್ಯವಾಗಿರುವ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಹೇಳಿದ್ದಾರೆ. 

ಕೋಮುಗಲಭೆ ಉಂಟುಮಾಡುವುದಕ್ಕೆ ಪ್ರಚೋದನೆ ನೀಡುವುದು ಹಾಗೂ  ಆಸ್ತಿ ಹಾನಿಗೆ ಪ್ರಚೋದನೆ ನೀಡಿ, ಕೋಮುಗಲಭೆಗೆ ಉತ್ತೇಜಿಸಿದ್ದ ಹುಸೇನ್ ಎಂಬಾತನೊಂದಿಗೆ ಖಾಲಿದ್ ಸಂಪರ್ಕದಲ್ಲಿದ್ದ ಎಂಬ ಬಗ್ಗೆಯೂ ಸಾಕ್ಷಿಗಳ ಹೇಳಿಕೆಗಳು ದಾಖಲಾಗಿವೆ ಎಂದು ಕೋರ್ಟ್ ಹೇಳಿದೆ. ಕಳೆದ ವರ್ಷ ಫೆಬ್ರವರಿ 24 ರಂದು ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಕೋಮು ಹಿಂಸಾಚಾರಕ್ಕೆ ತಿರುಗಿ 53 ಮಂದಿ ಸಾವನ್ನಪ್ಪಿದ್ದರು, 200 ಮಂದಿ ಗಾಯಗೊಂಡಿದ್ದರು. 

ಘಟನೆಗೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆಯಡಿಯಲ್ಲಿ ಉಮರ್ ಖಾಲಿದ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. 

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp