ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ಜಾಥ ಜ.7 ಕ್ಕೆ ಮುಂದೂಡಿಕೆ
ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವುದಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.06 ರಂದು ನಿಗದಿಪಡಿಸಿದ್ದ ಟ್ರ್ಯಾಕ್ಟರ್ ಜಾಥವನ್ನು ಜ.07 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
Published: 05th January 2021 08:40 PM | Last Updated: 05th January 2021 08:40 PM | A+A A-

ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ಜಾಥ ಜ.7 ಕ್ಕೆ ಮುಂದೂಡಿಕೆ
ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವುದಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.06 ರಂದು ನಿಗದಿಪಡಿಸಿದ್ದ ಟ್ರ್ಯಾಕ್ಟರ್ ಜಾಥವನ್ನು ಜ.07 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರೈತರ ಒಕ್ಕೂಟಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಟ್ರ್ಯಾಕ್ಟರ್ ಜಾಥಾವನ್ನು ಜ.07 ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಜ.07 ರಂದು ಟ್ರ್ಯಾಕ್ಟರ್ ಗಳ ಮೂಲಕ ಎಲ್ಲಾ ಪ್ರತಿಭಟನಾ ಸ್ಥಳಗಳಿಂದ ಕುಂಡ್ಲಿ ಮನೇಸರ್ ಪಲ್ವಾಲ್ ಬಳಿ ಜಮಾವಣೆಯಾಗಲಿರುವುದಾಗಿ ರೈತರ ಒಕ್ಕೂಟ ತಿಳಿಸಿದೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜ.07 ಕ್ಕೆ ಟ್ರ್ಯಾಕ್ಟರ್ ಜಾಥ ಮುಂದೂಡುತ್ತಿರುವುದಾಗಿ ರೈತರು ತಿಳಿಸಿದ್ದಾರೆ.
ಜ.26 ರಂದು ಮತ್ತೊಂದು ಟ್ರ್ಯಾಕ್ಟರ್ ಜಾಥದ ಬಗ್ಗೆಯೂ ಮಾತನಾಡಿರುವ ರೈತ ಮುಖಂಡರು ಹರ್ಯಾಣದ ಪ್ರತಿ ಗ್ರಾಮದಿಂದಲೂ ಟ್ರ್ಯಾಕ್ಟರ್ ಗಳನ್ನು ಕಳಿಸುವುದಾಗಿ ಹೇಳಿದ್ದಾರೆ.