ವಿಚ್ಛೇದನ ಪಡೆಯದೆ ಮತ್ತೊಂದು ಮದುವೆಯಾದ ಮಹಿಳೆಗೆ ಅಪ್ತಾಪ್ತ ಮಗುವಿನ ಪಾಲನೆ ಹಕ್ಕು ನಿರಾಕರಿಸುವಂತಿಲ್ಲ: ಅಲಹಾಬಾದ್ ಹೈಕೋರ್ಟ್

ಮೊದಲ ಪತಿಯಿಂದ ವಿಚ್ಛೇದನೆ ಪಡೆಯದೆ ಮತ್ತೊಬ್ಬ ಪುರುಷನ ಜೊತೆ ಹೊಸ ಸಂಬಂಧ ಬೆಳೆಸಿದ ಮಹಿಳೆಗೆ ಆಕೆಯ ಅಪ್ರಾಪ್ತ ಮಗುವಿನ ಪಾಲನೆಯ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

Published: 05th January 2021 08:06 AM  |   Last Updated: 05th January 2021 12:38 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಅಲಹಾಬಾದ್: ಮೊದಲ ಪತಿಯಿಂದ ವಿಚ್ಛೇದನೆ ಪಡೆಯದೆ ಮತ್ತೊಬ್ಬ ಪುರುಷನ ಜೊತೆ ಹೊಸ ಸಂಬಂಧ ಬೆಳೆಸಿದ ಮಹಿಳೆಗೆ ಆಕೆಯ ಅಪ್ರಾಪ್ತ ಮಗುವಿನ ಪಾಲನೆಯ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಕಳೆದ ತಿಂಗಳು ಹೇಬಿಯಸ್ ಕಾರ್ಪಸ್ ಅಡಿ ಅರ್ಜಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. 
ವಿಚ್ಛೇದನೆ ಪಡೆಯದೆ ಪತಿಯಿಂದ ದೂರವಾದ ಮಹಿಳೆ ಮತ್ತೊಬ್ಬ ವ್ಯಕ್ತಿ ಜೊತೆ ಸಂಸಾರ ಮಾಡಲು ಮುಂದಾದಾಗ ಎರಡನೇ ಮದುವೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಸಮಾಜದಲ್ಲಿ ಆಕೆ ಕೆಟ್ಟವಳಂತೆ ಕಂಡುಬಂದರೂ ಕೂಡ ಮೊದಲ ಗಂಡನಿಂದ ಪಡೆದ ಮಗುವಿಗೆ ಆಕೆ ತಾಯಿಯಾಗಿರುತ್ತಾಳೆ, ಅಪ್ರಾಪ್ತ ಮಗುವಿನ ಜೀವನದಲ್ಲಿ ತಾಯಿಗೆ ವಿಶೇಷ ಸ್ಥಾನಮಾನವಿದೆ, ಹೀಗಾಗಿ ಕಾನೂನಿನಲ್ಲಿ ಆ ಮಗುವಿನ ರಕ್ಷಣೆಯನ್ನು ನೋಡಿಕೊಳ್ಳುವ ಹಕ್ಕಿನಿಂದ ಮಹಿಳೆಯನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿ ಜೆ ಜೆ ಮುನಿರ್ ತೀರ್ಪು ನೀಡಿದ್ದಾರೆ.

ಅಪ್ರಾಪ್ತ ಮಗುವನ್ನು ತಾಯಿಯಿಂದ ದೂರ ಮಾಡುವುದರಿಂದ ಆ ಮಗುವಿನ ಒಟ್ಟಾರೆ ಬೆಳವಣಿಗೆ ಮೇಲೆ ಪರಿಣಾಮ ಬೀರಿಬಹುದು. ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸಹ ನ್ಯಾಯಾಲಯ ಹೇಳಿದೆ.

ರಾಮ್ ಕುಮಾರ್ ಗುಪ್ತಾ ಎಂಬುವವರು ತಮ್ಮ ಪತ್ನಿ ಸಂಯೋಗಿತ ತನಗೆ ವಿಚ್ಛೇದನೆ ನೀಡದೆ ಎರಡನೇ ಮದುವೆಯಾಗಿದ್ದು, ಇದರಿಂದಾಗಿ ತಮ್ಮ ಮಗ ಅನ್ಮೋಲ್ ನ್ನು ಪಾಲನೆ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾಳೆ, ನನ್ನ ಮಗನಿಗೆ ಬೇರೊಬ್ಬ ಅಪರಿಚಿತರ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp