ರಾಜ್ಯದ ಆರು ಸೇರಿ ದೇಶದಲ್ಲಿ 162 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕೇಂದ್ರದಿಂದ 201.58 ಕೋಟಿ ರೂ. ಮಂಜೂರು

ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ (ಪಿಎಂ ಕೇರ್ಸ್) ಫಂಡ್ ಟ್ರಸ್ಟ್ ದೇಶದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆಚ್ಚುವರಿಯಾಗಿ 162 ಮೀಸಲಾದ ಪಿಎಸ್ಎ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 201.58 ಕೋಟಿ ರೂ ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕದ ಆರು ಘಟಕಗಳು ಸಹ ಸೇರಿವೆ.

Published: 05th January 2021 08:03 PM  |   Last Updated: 05th January 2021 08:03 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : UNI

ನವದೆಹಲಿ: ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ (ಪಿಎಂ ಕೇರ್ಸ್) ಫಂಡ್ ಟ್ರಸ್ಟ್ ದೇಶದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆಚ್ಚುವರಿಯಾಗಿ 162 ಮೀಸಲಾದ ಪಿಎಸ್ಎ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 201.58 ಕೋಟಿ ರೂ ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕದ ಆರು ಘಟಕಗಳು ಸಹ ಸೇರಿವೆ.

ಘಟಕಗಳ ಪೂರೈಕೆ ಮತ್ತು ಕಾರ್ಯಾರಂಭ ಮತ್ತು ಕೇಂದ್ರ ವೈದ್ಯಕೀಯ ಸರಬರಾಜು ಮಳಿಗೆಯ (ಸಿಎಮ್‌ಎಸ್‌ಎಸ್) ನಿರ್ವಹಣಾ ಶುಲ್ಕಕ್ಕೆ 137.33 ಕೋಟಿ ರೂ. ಮತ್ತು ಸಮಗ್ರ ವಾರ್ಷಿಕ ನಿರ್ವಹಣೆ ಒಪ್ಪಂದಕ್ಕೆ ಸುಮಾರು 64.25 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.

 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ  ಒಟ್ಟು 154.19 ಮೆ.ಟನ್ ಸಾಮರ್ಥ್ಯದ ಒಟ್ಟು 162 ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.  ಘಟಕಗಳನ್ನು ಸ್ಥಾಪಿಸಬೇಕಾದ ಸರ್ಕಾರಿ ಆಸ್ಪತ್ರೆಗಳನ್ನು ಸಂಬಂಧಪಟ್ಟ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚಿಸಿ ಗುರುತಿಸಲಾಗಿದೆ.

ಈ ಕಾರ್ಯವಿಧಾನವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ದೀರ್ಘಕಾಲೀನ ವ್ಯವಸ್ಥಿತ ವೃದ್ಧಿಯ ಮೂಲಕ ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಕಡಿಮೆ ವೆಚ್ಚದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ. ಕೋವಿಡ್-19ರ ಮಧ್ಯಮ ಮತ್ತು ತೀವ್ರವಾದ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಜೊತೆಗೆ ಇತರ ವೈದ್ಯಕೀಯ ಪರಿಸ್ಥಿತಿಗಳಿಗಾಗಿ ಸಾಕಷ್ಟು ತಡೆರಹಿತ ಆಮ್ಲಜನಕದ ಪೂರೈಕೆಯು ಅವಶ್ಯಕತೆಯಾಗಿದೆ.      
 


Stay up to date on all the latest ರಾಷ್ಟ್ರೀಯ news
Poll
Omicron

ಮಾಲ್‌ಗಳು/ಥಿಯೇಟರ್‌ಗಳಿಗೆ ಭೇಟಿ ನೀಡಲು ಎರಡು ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದು ಸರಿಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp