'ತೈ ಪೂಸಂ' ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದ ತಮಿಳುನಾಡು ಸರ್ಕಾರ

ಮುರುಗನ ಪೂಜೆಗೆ ಮೀಸಲಾಗಿರುವ ಹಬ್ಬ 'ತೈ ಪೂಸಂ' ದಿನ ಸಾರ್ವಜನಿಕ ರಜೆ ಘೋಷಣೆ ಮಾಡಿ ಆದೇಶಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

Published: 05th January 2021 03:31 PM  |   Last Updated: 05th January 2021 03:31 PM   |  A+A-


CM Palaniswami

ಇ ಪಳನಿಸ್ವಾಮಿ

Posted By : Lingaraj Badiger
Source : PTI

ಚೆನ್ನೈ: ಮುರುಗನ ಪೂಜೆಗೆ ಮೀಸಲಾಗಿರುವ ಹಬ್ಬ 'ತೈ ಪೂಸಂ' ದಿನ ಸಾರ್ವಜನಿಕ ರಜೆ ಘೋಷಣೆ ಮಾಡಿ ಆದೇಶಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಪಳನಿಸ್ವಾಮಿ ಅವರು ರಾಜ್ಯದ ಹಲವಾರು ಜಿಲ್ಲೆಗಳ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಜನರು ತೈ ಪೂಸಂ ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸುವಂತೆ ಒತ್ತಾಯಿಸಿದ್ದರು ಮತ್ತು ಈಗಾಗಲೇ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲಿ ತೈ ಪೂಸಂಗೆ ರಜಾದಿನವೆಂದು ಘೋಷಿಸಲಾಗಿದೆ ಎಂದು ಹೇಳಿದ್ದರು.

"ವಿವಿದ ಜಿಲ್ಲೆಗಳ ಜನರ ಮನವಿಯನ್ನು ಪರಿಗಣಿಸಿ, ಜನವರಿ 28 ರಂದು(2021 ರಲ್ಲಿ) ತೈ ಪೂಸಂ ಹಬ್ಬದಂದು ಸಾರ್ವಜನಿಕ ರಜಾದಿನವೆಂದು ಘೋಷಿಸಲು ನಾನು ಆದೇಶಿಸಿದ್ದೇನೆ ಮತ್ತು ಮುಂದಿನ ವರ್ಷಗಳಲ್ಲಿ ಅದನ್ನು ಸಾರ್ವಜನಿಕ ರಜಾದಿನಗಳ ಪಟ್ಟಿಯಲ್ಲಿ ಸೇರಿಸಿದ್ದೇನೆ" ಎಂದು ತಮಿಳುನಾಡು ಸಿಎಂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ತೈ ಪೂಸಂ' ದಿನ ಸಾರ್ವಜನಿಕ ರಜಾದಿನವೆಂದು ಘೋಷಿಸುವಂತೆ ಭಕ್ತರು ದೀರ್ಘಕಾಲದಿಂದ ಸರ್ಕಾರವನ್ನು ಕೋರಿದ್ದರು ಎಂದು ನೆನಪಿಸಿಕೊಂಡಿರುವ ಸಿಎಂ, 'ತಮಿಳು ದೇವರಾದ ಮುರುಗ' ಪೂಜೆಗೆ ಮೀಸಲಾಗಿರುವ ತಮಿಳುನಾಡಿನ ಹಬ್ಬಗಳಲ್ಲಿ ತೈ ಪೂಸಂ ಬಹಳ ಮುಖ್ಯ ಹಬ್ಬ ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp