ಯುಪಿ ಚಾವಣಿ ಕುಸಿತ ಪ್ರಕರಣ: ಆರೋಪಿಗಳ ವಿರುದ್ಧ ಎನ್ಎಸ್ಎ ಅಡಿ ಕೇಸ್ ದಾಖಲಿಸಲು ಸಿಎಂ ಆದೇಶ
ಗಾಜಿಯಾಬಾದ್ ನ ಸ್ಮಶಾನದ ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನನ್ನು ಸೋಮವಾರ ಮಧ್ಯೆ ರಾತ್ರಿ ಬಂಧಿಸಿದ ಬೆನ್ನಲ್ಲೇ, ಎಲ್ಲಾ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಆದೇಶಿಸಿದ್ದಾರೆ.
Published: 05th January 2021 03:10 PM | Last Updated: 05th January 2021 03:10 PM | A+A A-

ಯೋಗಿ ಆದಿತ್ಯನಾಥ್
ಲಖನೌ: ಗಾಜಿಯಾಬಾದ್ ನ ಸ್ಮಶಾನದ ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನನ್ನು ಸೋಮವಾರ ಮಧ್ಯೆ ರಾತ್ರಿ ಬಂಧಿಸಿದ ಬೆನ್ನಲ್ಲೇ, ಎಲ್ಲಾ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಆದೇಶಿಸಿದ್ದಾರೆ.
ಅವಘಡ ನಡೆದ ನಂತರ ತಲೆಮರೆಸಿಕೊಂಡಿದ್ದ ಗುತ್ತಿಗೆದಾರ ಅಜಯ್ ತ್ಯಾಗಿಯನ್ನು ಪೊಲೀಸರು ಮೀರತ್ ಬಳಿ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದಕ್ಕು ಮುನ್ನ ಮೂವರನ್ನು ಪೊಲೀಸರು ಬಂಧಿಸಿದ್ದರು.
ಮತ್ತೊಂದು ಕಡೆ, ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತರ ರಕ್ತಸಂಬಂಧಿಗಳಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು 10 ಲಕ್ಷ ರೂ.ಗೆ ಏರಿಸಿದ್ದಾರೆ.
ಭಾನುವಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ 25 ಮಂದಿ ಚಾವಣಿ ಕುಸಿತದಿಂದ ಮೃತಪಟ್ಟಿದ್ದರು. ಇತರ 17 ಮಂದಿ ಗಾಯಗೊಂಡಿದ್ದರು.
ಗಾಜಿಯಾಬಾದ್ ಠಾಣೆಯ ಪೊಲೀಸರು ಸೋಮವಾರ ಮುರ್ದಾನಗರದ ಪಾಲಿಕೆ ಕಾರ್ಯನಿರ್ವಾಹಕ ಅಧಿಕಾರಿ ನಿಹಾರಿಕಾ ಸಿಂಗ್, ಕಿರಿಯ ಎಂಜಿನಿಯರ್ ಚಂದ್ರಪಾಲ್, ಮೇಲ್ವಿಚಾರಕ ಆಶೀಶ್ ಅವರನ್ನು ಬಂಧಿಸಿದ್ದರು. ಈ ಎಲ್ಲರೂ ಕಟ್ಟಡ ಸಂಬಂಧಿತ ಗುತ್ತಿಗೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇವರನ್ನು 14 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.