2018 ರಿಂದ 460 ನಕ್ಸಲರ ಹತ್ಯೆ, 161 ಭದ್ರತಾ ಸಿಬ್ಬಂದಿ ಮೃತ್ಯು: ಆರ್‌ಟಿಐ ಮಾಹಿತಿ

2018 ರಿಂದ ಈಚೆಗೆ ಒಟ್ಟೂ 460 ನಕ್ಸಲ್ ಗಳು, ಎಡಪಂಥೀಯ ಉಗ್ರಗಾಮಿಗಳು ಭದ್ರತಾ ಪಡೆಗಳಿಂದ ಹತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Published: 06th January 2021 05:09 PM  |   Last Updated: 06th January 2021 06:26 PM   |  A+A-


Posted By : Raghavendra Adiga
Source : PTI

ನವದೆಹಲಿ: 2018 ರಿಂದ ಈಚೆಗೆ ಒಟ್ಟೂ 460 ನಕ್ಸಲ್ ಗಳು, ಎಡಪಂಥೀಯ ಉಗ್ರಗಾಮಿಗಳು ಭದ್ರತಾ ಪಡೆಗಳಿಂದ ಹತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದೇ ಅವಧಿಯಲ್ಲಿ, 161 ಭದ್ರತಾ ಪಡೆ ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗಲೇ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಧೀನದಲ್ಲಿರುವ ಎಡಪಂಥೀಯ ಉಗ್ರಗಾಮಿ ವಿಭಾಗ ಆರ್‌ಟಿಐ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈ ಮಾಹಿತಿ ಬಯಲಾಗಿದೆ.

ನೋಯ್ಡಾ ಮೂಲದ ವಕೀಲ ಮತ್ತು ಆರ್‌ಟಿಐ ಕಾರ್ಯಕರ್ತ ರಂಜನ್ ತೋಮರ್ರು 2018 ಮತ್ತು 2020 ರ ನಡುವೆ ಎಂಎಚ್‌ಎ ಭದ್ರತಾ ಸಿಬ್ಬಂದಿಗಳ ಸಾವು ಮತ್ತು ಎಲ್‌ಡಬ್ಲ್ಯುಇಗಳ ಹತ್ಯೆ ಕುರಿತಾದ ಮಾಹಿತಿ ಕೋರಿದ್ದರು. ಆದಾಗ್ಯೂ, ಅಧಿಕೃತ ಪ್ರತಿಕ್ರಿಯೆಯುನವೆಂಬರ್ 2020 ರವರೆಗಿನ ಅಂಕಿಅಂಶಗಳನ್ನು ಮಾತ್ರ ವಿವರಿಸಿದೆ.

2018 ರಿಂದ ನವೆಂಬರ್ 2020 ರವರೆಗೆ ಎಲ್‌ಡಬ್ಲ್ಯುಇ ಹಿಂಸಾಚಾರದಲ್ಲಿ 460 ಎಡಪಂಥೀಯ ಉಗ್ರಗಾಮಿಗಳು ಹತರಾಗಿದ್ದಾರೆ ಮತ್ತು 161 ಭದ್ರತಾ ಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಉತ್ತರದಲ್ಲಿ ಹೇಳಲಾಗಿದೆ.

2020 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಎಲ್‌ಡಬ್ಲ್ಯುಇ ಅಥವಾ ನಕ್ಸಲ್ ಹಿಂಸಾಚಾರವು ದೇಶದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ, ಕೇವಲ 46 ಜಿಲ್ಲೆಗಳಲ್ಲಿ ಮಾತ್ರ ನಕ್ಸಲ್ ಭೀತಿ ಇದೆ ಎಂದು ಹೇಳಿಕೊಂಡಿತ್ತು. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp