ಪೊಂಗಲ್ ಗೆ ಅಮಿತ್ ಶಾ ಬದಲು ಬಿಜೆಪಿ ಅಧ್ಯಕ್ಷ ನಡ್ಡಾ ಚೆನ್ನೈಗೆ ಭೇಟಿ

ತುಗ್ಲಾಕ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪೊಂಗಲ್(ಜನವರಿ 14)ಗೆ ಚೆನ್ನೈಗೆ ಭೇಟಿ ನೀಡಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ.

Published: 06th January 2021 08:05 PM  |   Last Updated: 06th January 2021 08:05 PM   |  A+A-


Amit shah

ಅಮಿತ್ ಶಾ

Posted By : Lingaraj Badiger
Source : The New Indian Express

ಚೆನ್ನೈ: ತುಗ್ಲಾಕ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪೊಂಗಲ್(ಜನವರಿ 14)ಗೆ ಚೆನ್ನೈಗೆ ಭೇಟಿ ನೀಡಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ. ಅಮಿತ್ ಶಾ ಬದಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಡ್ಡಾ ಡಿಸೆಂಬರ್ 30 ಮತ್ತು 31 ರಂದು ಚೆನ್ನೈಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಡಿಸೆಂಬರ್ ಮಧ್ಯದಲ್ಲಿ ಅವರಿಗೆ ಕೋವಿಡ್-19 ಪಾಸಿಟಿವ್ ಬಂದ ನಂತರ ಅವರು ಚೆನ್ನೈ ಭೇಟಿ ರದ್ದುಪಡಿಸಿದ್ದರು.

ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜೆಪಿ ನಡ್ಡಾ ಅವರ ಚೆನ್ನೈ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ, ರಾಷ್ಟ್ರೀಯ ನಾಯಕತ್ವ ಮಾತ್ರ ಅದನ್ನು ಘೋಷಿಸುತ್ತದೆ ಎಂದು ತಮಿಳುನಾಡಿನ ಬಿಜೆಪಿ ನಾಯಕರು ಪುನರುಚ್ಚರಿಸುತ್ತಿದ್ದಾರೆ.

ಎಐಎಡಿಎಂಕೆ ಉನ್ನತ ನಾಯಕರಾದ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಒ ಪನ್ನೀರ್ಸೆಲ್ವಂ ಅವರು ನವೆಂಬರ್ 21 ರಂದು ಅಮಿತ್ ಶಾ ಸಮ್ಮುಖದಲ್ಲಿ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದರೂ, ಬಿಜೆಪಿ ನಾಯಕತ್ವ ಇನ್ನೂ ಅದಕ್ಕೆ ಸ್ಪಂದಿಸಬೇಕಾಗಿದೆ. ಆದ್ದರಿಂದ, ನಡ್ಡಾ ಭೇಟಿಯ ಸಮಯದಲ್ಲಿ, ಈ ಎಲ್ಲಾ ವಿಷಯಗಳು ಸ್ಪಷ್ಟವಾಗುವ ಸಾಧ್ಯತೆಯಿದೆ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp