ವಿಜಯ್ ಚಿತ್ರಕ್ಕೆ ಸಂಕಷ್ಟ: ಥಿಯೇಟರ್ ಸಂಪೂರ್ಣ ಭರ್ತಿ ಆದೇಶ ಹಿಂಪಡೆಯಿರಿ; ತಮಿಳುನಾಡಿಗೆ ಕೇಂದ್ರ ಸೂಚನೆ
ತಮಿಳುನಾಡು ಸರ್ಕಾರವು ಥಿಯೇಟರ್ ಆಸನ ಸಾಮರ್ಥ್ಯವನ್ನು 100 ಪ್ರತಿಶತಕ್ಕೆ ಹೆಚ್ಚಿಸಿದ ಕೆಲ ದಿನಗಳ ನಂತರ ಕೇಂದ್ರದ ಮಾರ್ಗಸೂಚಿಗಳನ್ನು ದಿಕ್ಕರಿಸದಂತೆ ಸೂಚಿಸಿದೆ.
Published: 06th January 2021 07:46 PM | Last Updated: 06th January 2021 07:46 PM | A+A A-

ಮಾಸ್ಟರ್ ಚಿತ್ರದ ಪೋಸ್ಟರ್
ಚೆನ್ನೈ: ತಮಿಳುನಾಡು ಸರ್ಕಾರವು ಥಿಯೇಟರ್ ಆಸನ ಸಾಮರ್ಥ್ಯವನ್ನು 100 ಪ್ರತಿಶತಕ್ಕೆ ಹೆಚ್ಚಿಸಿದ ಕೆಲ ದಿನಗಳ ನಂತರ ಕೇಂದ್ರದ ಮಾರ್ಗಸೂಚಿಗಳನ್ನು ದಿಕ್ಕರಿಸದಂತೆ ಸೂಚಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ಶಣ್ಮುಗಂ ಅವರನ್ನು ಉದ್ದೇಶಿಸಿ, ಡಿಸೆಂಬರ್ 28ರಂದು ಗೃಹ ಸಚಿವಾಲಯದ ಆದೇಶವನ್ನು ದಿಕ್ಕರಿಸಿ ಆಸನಗಳನ್ನು 50ರಿಂದ 100 ಪ್ರತಿಶತದಷ್ಟು ಹೆಚ್ಚಿಸುವ ತಮಿಳುನಾಡಿನ ಕ್ರಮ ಸರಿಯಲ್ಲ ಎಂದು ಹೇಳಿದ್ದು ಕೇಂದ್ರದ ಮಾರ್ಗಸೂಚಿಯಂತೆ 50ರಷ್ಟು ಆಸನ ಭರ್ತಿಗೆ ಆದೇಶಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ.
ಕೇಂದ್ರ ಮಾರ್ಗಸೂಚಿಗಳು ಚಿತ್ರಮಂದಿರಗಳಲ್ಲಿ ಕೇವಲ 50 ಪ್ರತಿಶತದಷ್ಟು ಸಾಮರ್ಥ್ಯವನ್ನು ಮಾತ್ರ ಅನುಮತಿಸುತ್ತವೆ. ಇದು ಜನವರಿ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಬರೆದಿದ್ದಾರೆ.
"ಮೇಲಿನದನ್ನು ಗಮನದಲ್ಲಿಟ್ಟುಕೊಂಡು, 2020ರ ಡಿಸೆಂಬರ್ 28ರ ಕೇಂದ್ರ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಮ್ಮ ಮಾರ್ಗಸೂಚಿಗಳನ್ನು ತಂದು ಅಂದನ್ನು ಸಚಿವಾಲಯಕ್ಕೆ ತಿಳಿಸಲು ಅಗತ್ಯವಾದ ಆದೇಶವನ್ನು ತಮಿಳುನಾಡಿಗೆ ನೀಡಲಾಗಿದೆ ಎಂದು ಅಜಯ್ ಭಲ್ಲಾ ಪತ್ರದಲ್ಲಿ ತಿಳಿಸಿದ್ದಾರೆ.
ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ಆಸನ ಸಾಮರ್ಥ್ಯವನ್ನು ಪ್ರತಿಶತ 100ಕ್ಕೆ ಏರಿಸುವಂತೆ ವಿಜಯ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.