ಟಿಆರ್ ಪಿ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ವಿರುದ್ಧ ಸಾಕ್ಷ್ಯ ಇದೆ: ಹೈಕೋರ್ಟ್ ಗೆ ಮುಂಬೈ ಪೊಲೀಸ್
ಟಿಆರ್ ಪಿ ಹಗರಣ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ವಿರುದ್ಧ ಸಾಕ್ಷ್ಯ ಲಭ್ಯವಾಗಿದೆ ಎಂದು ಮುಂಬೈ ಪೊಲೀಸರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
Published: 06th January 2021 07:31 PM | Last Updated: 06th January 2021 07:31 PM | A+A A-

ಟಿಆರ್ ಪಿ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ವಿರುದ್ಧ ಸಾಕ್ಷ್ಯ ಇದೆ: ಹೈಕೋರ್ಟ್ ಗೆ ಮುಂಬೈ ಪೊಲೀಸ್
ಮುಂಬೈ: ಟಿಆರ್ ಪಿ ಹಗರಣ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿ ವಿರುದ್ಧ ಸಾಕ್ಷ್ಯ ಲಭ್ಯವಾಗಿದೆ ಎಂದು ಮುಂಬೈ ಪೊಲೀಸರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ರಿಪಬ್ಲಿಕ್ ಟಿವಿ ಸ್ಥಾಪಕ ಅರ್ನಬ್ ಗೋಸ್ವಾಮಿ ಹಾಗೂ ಸಂಸ್ಥೆಯ ವಿರುದ್ಧ ಸಾಕ್ಷ್ಯ ಲಭ್ಯವಾಗಿದ್ದ ಕಾರಣದಿಂದಾಗಿ ಅವರಿಗೆ ಕ್ರಮ ಕೈಗೊಳ್ಳುವುದರಿಂದ ರಕ್ಷಣೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಆದರೆ ರಿಪಬ್ಲಿಕ್ ಪರ ವಕೀಲ ಹರೀಶ್ ಸಾಳ್ವೆ ಅವರ ಅಲಭ್ಯತೆಯ ಕಾರಣದಿಂದಾಗಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಈ ಕಾರಣದಿಂದಾಗಿ ಜ.15 ವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ಈ ಹಿಂದಿನ ಭರವಸೆಯನ್ನು ಮುಂದುವರೆಸುವಾಗಿ ಹೈಕೋರ್ಟ್ ಗೆ ಪೊಲೀಸರು ತಿಳಿಸಿದ್ದಾರೆ.
ಹೆಚ್ಚು ಜಾಹಿರಾತನ್ನು ಪಡೆಯುವುದಕ್ಕಾಗಿ ಟಿಆರ್ ಪಿ ಅಂಕಿ-ಅಂಶಗಳನ್ನು ತಿರುಚಲಾಗಿದೆ ಎಂದು ಬಿಎಆರ್ ಸಿ ದೂರು ನೀಡಿದ ಬಳಿಕ ಕಳೆದ ವರ್ಷ ಟಿಆರ್ ಪಿ ಹಗರಣವನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದರು. ಈ ಹಗರಣದಲ್ಲಿ ಪ್ರತಿಷ್ಠಿತ ರಿಪಬ್ಲಿಕ್ ಚಾನಲ್ ಹೆಸರೂ ಕೇಳಿಬಂದಿತ್ತು.
ಹರೀಶ್ ಸಾಳ್ವೆ ಕುಟುಂಬದಲ್ಲಿ ವೈದ್ಯಕೀಯ ತುರ್ತು ಅಗತ್ಯವಿರುವ ಹಿನ್ನೆಲೆಯಲ್ಲಿ ಹರೀಶ್ ಸಾಳ್ವೆ ಕೋರ್ಟ್ ಕಲಾಪಕ್ಕೆ ಹಾಜರಾಗಿರಲಿಲ್ಲ.