ಪೊಲ್ಲಾಚಿ ಲೈಂಗಿಕ ಕಿರುಕುಳ ಕೇಸ್: ಎಐಎಡಿಎಂಕೆ ಕಾರ್ಯಕಾರಿ ಸೇರಿದಂತೆ ಸಿಬಿಐನಿಂದ ಮೂವರ ಬಂಧನ
ಪೊಲ್ಲಾಚಿ ಲೈಂಗಿಕ ಕಿರುಕುಳ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಎಐಎಡಿಎಂಕೆ ಕಾರ್ಯಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
Published: 06th January 2021 11:54 AM | Last Updated: 06th January 2021 11:54 AM | A+A A-

ಸಾಂದರ್ಭಿಕ ಚಿತ್ರ
ಕೊಯಂಬತ್ತೂರು: ಪೊಲ್ಲಾಚಿ ಲೈಂಗಿಕ ಕಿರುಕುಳ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಎಐಎಡಿಎಂಕೆ ಕಾರ್ಯಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ವಡುಗಪಾಳ್ಯಂನ ಕೆ.ಅರುಳಾನಂದಮ್, ಹೀರೆನ್ ಪೌಲ್, ಮತ್ತು ಪಿ ಬಾಬು ಬಂಧಿತ ಆರೋಪಿಗಳು. ಅರುಣಾಚಲಂ ಪೊಲ್ಲಾಚಿ ಪಟ್ಟಣದ ಎಐಎಎಡಿಎಂಕೆ ವಿದ್ಯಾರ್ಥಿ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.
ಈ ಪ್ರಕರಣವನ್ನು 2019 ರ ಮಾರ್ಚ್ನಲ್ಲಿ ತನಿಖೆಗಾಗಿ ಕೈಗೆತ್ತಿಕೊಂಡಿರುವ ಸಿಬಿಐ, ಮೂವರನ್ನು ಮಂಗಳವಾರ ಸಂಜೆ ಪೊಲಾಚಿಯಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ವಿಚಾರಣೆಯ ನಂತರ, ಏಜೆನ್ಸಿ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಾಜರುಪಡಿಸಿದೆ. ಬುಧವಾರ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆಯಿದೆ.
ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆ ಎರಡು ಎಫ್ಐಆರ್ಗಳನ್ನು ದಾಖಲಿಸಿದೆ , ಒಂದು ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಮತ್ತು ಎರಡನೆಯದು ಆಕೆಯ ಸಂತ್ರಸ್ತೆಯ ಸಹೋದರನ ಮೇಲೆ ಹಲ್ಲೆ ಸಂಬಂಧ ಕೇಸ್ ದಾಖಲಿಸಲಾಗಿದೆ.
ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ ಐವರು ಆರೋಪಿಗಳ ಧ್ವನಿ ಮಾದರಿಗಳನ್ನು ಪರೀಕ್ಷಿಸಲು ಕೊಯಮತ್ತೂರು ಮಹಿಳಾ ನ್ಯಾಯಾಲಯವು ಕಳೆದ ಡಿಸೆಂಬರ್ನಲ್ಲಿ ಕೇಂದ್ರ ತನಿಖಾ ದಳಕ್ಕೆ ಅನುಮತಿ ನೀಡಿತ್ತು.
ಕೆ ತಿರುನಾವುಕ್ಕರಸು, ಎನ್ ಸಬರಿರಾಜನ್ ಅಲಿಯಾಸ್ ರಿಶ್ವಂತ್, ಎನ್ ಸತೀಶ್, ಟಿ ವಸಂತಕುಮಾರ್ ಮತ್ತು ಆರ್ ಮಣಿವಣ್ಣನ್ ಅವರನ್ನು ಬಂಧಿಸಲಾಗಿತ್ತು.
ಫೆಬ್ರವರಿ 12, 2019 ರಂದು ಪೊಲ್ಲಾಚಿ ಬಳಿ 19 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಆರೋಪಿ ವಿಡಿಯೋ ಈ ಕೃತ್ಯವನ್ನು ರೆಕಾರ್ಡ್ ಮಾಡಿ ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾದ ನಂತರ, ಲೈಂಗಿಕ ದೌರ್ಜನ್ಯದ ಕೆಲವು ವೀಡಿಯೊಗಳು ಹೊರಬಂದವು. ಐವರು ಆರೋಪಿಗಳ ವಿರುದ್ಧ ಏಜೆನ್ಸಿ 2019 ರ ಮೇ ತಿಂಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು.