ಮೂರು ವರ್ಷಗಳ ಹಿಂದೆ ಇಸ್ರೋ ವಿಜ್ಞಾನಿಗೆ ವಿಷಪ್ರಾಶನ? ಅವರು ಯಾರು? ಯಾಕೆ ಗೊತ್ತೆ?

ಅಗ್ರಮಾನ್ಯ ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಅವರಿಗೆ 3 ವರ್ಷಗಳ ಹಿಂದೆ ವಿಷಪ್ರಾಶನ ಮಾಡಿಸಲಾಗಿತ್ತು ಎಂಬ ಅಘಾತಕಾರಿ ಅಂಶ ಈಗ ಬೆಳಕಿಗೆ ಬಂದಿದೆ. 

Published: 06th January 2021 02:16 AM  |   Last Updated: 06th January 2021 12:36 PM   |  A+A-


Top ISRO scientist Tapan Misra claims he was poisoned three years ago

ಮೂರು ವರ್ಷಗಳ ಹಿಂದೆ ಇಸ್ರೋ ವಿಜ್ಞಾನಿಗೆ ವಿಷಪ್ರಾಶನ? ಯಾರು? ಯಾಕೆ ಗೊತ್ತೆ?

Posted By : Srinivas Rao BV
Source : The New Indian Express

ಬೆಂಗಳೂರು: ಅಗ್ರಮಾನ್ಯ ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಅವರಿಗೆ 3 ವರ್ಷಗಳ ಹಿಂದೆ ವಿಷಪ್ರಾಶನ ಮಾಡಿಸಲಾಗಿತ್ತು ಎಂಬ ಅಘಾತಕಾರಿ ಅಂಶ ಈಗ ಬೆಳಕಿಗೆ ಬಂದಿದೆ. 

ಸ್ವತಃ ತಪನ್ ಮಿಶ್ರಾ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.  

ಇಸ್ರೋ ಕೇಂದ್ರ ಕಚೇರಿಯಲ್ಲಿ ಬಡ್ತಿ ಸಂದರ್ಶನದ ಅವಧಿಯಲ್ಲಿ 2017 ರ ಮೇ.23 ರಂದು ತಮಗೆ ಮಾರಕ ಆರ್ಸೆನಿಕ್ ಟ್ರೈಯಾಕ್ಸೈಡ್ ನ್ನು ಉಣಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಮಾರಕ ಪ್ರಮಾಣದಲ್ಲಿ ದೋಸೆ ಹಾಗೂ ಚಟ್ನಿಗೆ, ಸ್ನ್ಯಾಕ್ಸ್, ಮಧ್ಯಾಹ್ನದ ಭೋಜನಕ್ಕೆ ಇದನ್ನು ಮಿಶ್ರಣ ಮಾಡಿ ನೀಡಲಾಗಿತ್ತು ಎಂದು ಮಿಶ್ರಾ ಹೇಳಿದ್ದಾರೆ.

ಇಸ್ರೋದಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮಿಶ್ರಾ, ಈ ತಿಂಗಳಾಂತ್ಯಕ್ಕೆ ನಿವೃತ್ತಿಯಾಗುತ್ತಿದ್ದಾರೆ.

ಫೇಸ್ ಬುಕ್ ಪೋಸ್ಟ್ ಮೂಲಕ ಮಿಶ್ರಾ ಈ ರೀತಿಯ ಗಂಭೀರ ಮಾಹಿತಿಯನ್ನು ಬಹಿರಂಗಪಡಿಸಿದ್ದು, "ಇದು ದೀರ್ಘಾವಧಿಯ ರಹಸ್ಯ, 2017 ರ ಜುಲೈ ತಿಂಗಳಲ್ಲಿ ಗೃಹ ಖಾತೆಯ ಭದ್ರತಾ ಸಿಬ್ಬಂದಿಗಳು ತಮ್ಮನ್ನು ಭೇಟಿ ಮಾಡಿ, ಆರ್ಸೆನಿಕ್ ವಿಷಪ್ರಾಶನದ ಬಗ್ಗೆ ಎಚ್ಚರಿಕೆ ನೀಡಿದ್ದರು ಹಾಗೂ ಸೂಕ್ತ ವೈದ್ಯಕೀಯ ಪರಿಹಾರ ಕಂಡುಕೊಳ್ಳುವುದಕ್ಕೆ ಸಹಾಯ ಮಾಡಿದ್ದರು ಎಂದು ಮಿಶ್ರಾ ಬರೆದುಕೊಂಡಿದ್ದಾರೆ.

ಈ ಘಟನೆಯಾದ ಬಳಿಕ ತಮಗೆ ಆರೋಗ್ಯ ಸಮಸ್ಯೆಗಳು ಎದುರಾದವು, ಉಸಿರಾಟದ ಸಮಸ್ಯೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಫಂಗಲ್ ಸೋಂಕು ಉಂಟಾಗಲು ಪ್ರಾರಂಭವಾದವು ಎಂದೂ ಮಿಶ್ರಾ ತಿಳಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಏಮ್ಸ್ ವೈದ್ಯರು ನೀಡಿದ ವರದಿಯನ್ನೂ ಫೇಸ್ ಬುಕ್ ನಲ್ಲೇ ಪ್ರಕಟಿಸಿದ್ದಾರೆ.

ಸೇನೆ ಹಾಗೂ ವಾಣಿಜ್ಯದ ಮಹತ್ವ ಸಂಗತಿಗಳನ್ನು ಅರಿತಿದ್ದವರ ಮೇಲೆ ನಡೆದಿರಬಹುದಾದ ಬೇಹುಗಾರಿಕೆ ದಾಳಿ ಇದಾಗಿದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp